
ಪ್ರಧಾನಿ ಮೋದಿ ತದ್ರೂಪಿ : ಈ ಹಿಂದೆ ನರೇಂದ್ರ ಮೋದಿ ಅವರನ್ನೇ ಹೋಲುವ ವ್ಯಕ್ತಿಯ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಥೇಟ್ ಮೋದಿ ಅವರಂತೆಯೇ ಕಾಣ್ತಿರೋ ಈ ವ್ಯಕ್ತಿ ರಾತ್ರಿ ಬೆಳಗಾಗೋದ್ರೊಳಗೆ ಫೇಮಸ್ ಆಗಿದ್ದರು.
ಸೈಫ್ ಅಲಿ ಖಾನ್ ತದ್ರೂಪಿ : ಪೆಟ್ರೋಲ್ ಬಂಕ್ ನಲ್ಲಿ ಥೇಟ್ ನಟ ಸೈಫ್ ಅಲಿ ಖಾನ್ ರಂತೆಯೇ ಇರೋ ವ್ಯಕ್ತಿಯನ್ನು ನೋಡಿ ಎಲ್ರೂ ಅಚ್ಚರಿಪಟ್ಟಿದ್ರು. ಜಗತ್ತಿನಲ್ಲಿ ಒಬ್ಬರಂತೆಯೇ 6 ಜನರು ಇರ್ತಾರೆ. ಈ ವ್ಯಕ್ತಿ ಕೂಡ ಸೈಫ್ ಅಲಿ ಖಾನ್ ತದ್ರೂಪಿಯಂತಿದ್ದಾನೆ.
ಕಾಯ್ನಾತ್ ಅರೋರಾ : ಈ ಸೂಪರ್ ಕಾಪ್ ನೋಡಿ ಭಾರತೀಯರೆಲ್ಲ ದಂಗು ಬಡಿದಿದ್ರು. ಪೊಲೀಸ್ ಅಧಿಕಾರಿಯ ಚೆಲುವಿಗೆ ಮನಸೋತು ಕೆಲವರು ಅರೆಸ್ಟ್ ಮಾಡಿ ಅಂತಾ ಹೇಳಿದ್ರು. ಈ ಫೋಟೋ ಇಂಟರ್ನೆಟ್ ನಲ್ಲಿ ವೈರಲ್ ಆಗಿತ್ತು. ಇಷ್ಟೆಲ್ಲಾ ಆದ್ಮೇಲೆ ತಾನು ಅಸಲಿ ಪೊಲೀಸ್ ಅಧಿಕಾರಿಯಲ್ಲ ಅನ್ನೋದನ್ನು ನಟಿ ಕಾಯ್ನಾತ್ ಅರೋರಾ ಸ್ಪಷ್ಟಪಡಿಸಿದ್ದರು.
‘ರಾಬರ್ಟ್’ ಚಿತ್ರದ ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ ಸಾಂಗ್ ರಿಲೀಸ್ ಆಗುತ್ತಿದ್ದಂತೆ ಮುಗಿಬಿದ್ದು ವೀಕ್ಷಿಸಿದ ಅಭಿಮಾನಿಗಳು
ಪ್ರಶಾಂತ್ ಸೇಥಿ ರಾಹುಲ್ ತದ್ರೂಪಿ : ಗುಜರಾತ್ ನ ಸೂರತ್ ನಲ್ಲಿರೋ ರೆಸ್ಟೋರೆಂಟ್ ಒಂದರ ಮಾಲೀಕ ಪ್ರಶಾಂತ್ ಸೇಥಿ. ಅವರನ್ನು ಸ್ನೇಹಿತರೆಲ್ಲಾ ರಾಹುಲ್ ಗಾಂಧಿ ಅಂತಾನೇ ಕರೆಯುತ್ತಿದ್ರು. ಅವರ ಫೋಟೋ ಇಂಟರ್ನೆಟ್ ನಲ್ಲಿ ವೈರಲ್ ಆಗ್ತಿದ್ದಂತೆ ಬಹು ಜನಪ್ರಿಯರಾಗಿದ್ದರು. ಪತ್ನಿ ಕೂಡ ಪ್ರಶಾಂತ್ ಸೇಥಿಯನ್ನು ರಾಹುಲ್ ಅಂತಾನೇ ಕರೆಯುತ್ತಾಳಂತೆ.
ಬಾಳಾ ಠಾಕ್ರೆ ತದ್ರೂಪಿ ಫೋಟೋ : ಶಿವಸೇನೆಯ ನಾಯಕರಾಗಿದ್ದ ಬಾಳಾ ಠಾಕ್ರೆ ಅವರನ್ನೇ ಹೋಲುವ ವ್ಯಕ್ತಿಯೊಬ್ಬ ಇಂಟರ್ನೆಟ್ ನಲ್ಲಿ ಸಂಚಲನ ಮೂಡಿಸಿದ್ದರು. ಮಹಾರಾಷ್ಟ್ರದಲ್ಲಿ ಯಾರೋ ಇವರನ್ನು ನೋಡಿ ಫೋಟೋ ಕ್ಲಿಕ್ಕಿಸಿ ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡಿದ್ದರು.