ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಟೊರೆಂಟ್ ಸೈಟ್ ಗಳಲ್ಲಿ ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ. ಪೈರಸಿಯನ್ನು ತಡೆಯುವಂತೆ YRF ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದೆ.
4 ವರ್ಷಗಳ ನಂತರ ಶಾರುಖ್ ಖಾನ್ ಅವರ ಕಮ್ ಬ್ಯಾಕ್ ಸಿನಿಮಾ ‘ಪಠಾಣ್’ ಈ ವರ್ಷದ ಬಹು ನಿರೀಕ್ಷಿತ ಚಿತ್ರವಾಗಿದೆ. ಇದೀಗ ಬಿಡುಗಡೆಗೆ ಒಂದು ದಿನ ಮುಂಚಿತವಾಗಿಯೇ ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆಗಿದೆ. ಯಶ್ ರಾಜ್ ಫಿಲ್ಮ್ಸ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸ್ಪೈಲರ್ ಗಳು ಮತ್ತು ಪೈರಸಿಯನ್ನು ತಪ್ಪಿಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿದೆ.
ಚಿತ್ರದ ಯಾವುದೇ ವೀಡಿಯೊಗಳನ್ನು ರೆಕಾರ್ಡ್ ಮಾಡುವುದನ್ನು, ಆನ್ ಲೈನ್ ನಲ್ಲಿ ಹಂಚಿಕೊಳ್ಳುವುದನ್ನು ಮತ್ತು ಯಾವುದೇ ಸ್ಪಾಯ್ಲರ್ಗಳನ್ನು ನೀಡುವುದನ್ನು ತಡೆಯಲು ಎಲ್ಲರಿಗೂ ವಿನಮ್ರ ವಿನಂತಿ. ಚಿತ್ರಮಂದಿರಗಳಲ್ಲಿ ಮಾತ್ರ ‘ಪಠಾಣ್’ ವೀಕ್ಷಿಸಿ ಎಂದು ಹೇಳಲಾಗಿದೆ.
https://www.instagram.com/p/CnzLUttBTZ9/?utm_source=ig_embed&ig_rid=6a36db09-d2ac-4727-9438-6f73e2915757