
ದುರಾದೃಷ್ಟವಶಾತ್ ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ ಎಂದು ನಟ ಟ್ವೀಟ್ ಮಾಡಿದ್ದಾರೆ. ಅಲ್ಲದೇ ನನ್ನ ಜೊತೆ ಕಳೆದ 10 ದಿನಗಳಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಮಾರ್ಚ್ 9ರಂದು ಪರೇಶ್ ರಾವಲ್ ಕೊರೊನಾ ಲಸಿಕೆಯ ಮೊದಲ ಡೋಸ್ನ್ನು ಪಡೆದಿದ್ದರು. ಈ ಬಗ್ಗೆ ಟ್ವಿಟರ್ನಲ್ಲಿ ಪರೇಶ್ ರಾವಲ್ ಮಾಹಿತಿ ನೀಡಿದ್ದರು. ಈ ಟ್ವೀಟ್ನಲ್ಲಿ ಪರೇಶ್ ಪ್ರಧಾನಿ ಮೋದಿ, ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ.