ಹಾಲಿವುಡ್ ಚಿತ್ರ ಬೇವಾಚ್ ಮೂಲಕ ಪ್ರಸಿದ್ಧಿಗೆ ಬಂದಿರುವ ನಟಿ ಪಮೇಲಾ ಆಂಡರ್ಸನ್ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಫೇಸ್ಬುಕ್, ಟ್ವೀಟರ್, ಇನ್ಸ್ಟ್ರಾಗ್ರಾಮ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಪಮೇಲಾ ಆಂಡರ್ಸನ್ ಇನ್ಮುಂದೆ ಸಕ್ರಿಯವಾಗಿರುವುದಿಲ್ಲ. ಮನುಷ್ಯನ ಮನಸ್ಸನ್ನು ಸಾಮಾಜಿಕ ಜಾಲತಾಣಗಳು ನಿಯಂತ್ರಿಸುತ್ತವೆ ಎಂದಿರುವ ನಟಿ, ಸಾಮಾಜಿಕ ಜಾಲತಾಣಗಳಿಂದ ಹೊರ ಬರಲು ನಿರ್ಧರಿಸಿದ್ದಾರೆ.
ಇನ್ಮುಂದೆ ಪ್ರಕೃತಿ ಮಧ್ಯೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುತ್ತೇನೆಂದು ಪಮೇಲಾ ಆಂಡ್ರರ್ಸನ್ ಹೇಳಿದ್ದಾರೆ. ಇದು ನನ್ನ ಕೊನೆಯ ಪೋಸ್ಟ್ ಎಂದು ಬರೆದಿರುವ ನಟಿ, ಸಾಮಾಜಿಕ ಜಾಲತಾಣದ ಬಗ್ಗೆ ಮೊದಲಿನಿಂದಲೂ ಹೆಚ್ಚು ಆಸಕ್ತಿಯಿರಲಿಲ್ಲ. ನಾನು ಜೀವನದಲ್ಲಿ ಒಂದು ಹಂತಕ್ಕೇರಿದ್ದೇನೆ. ಈಗ ಪ್ರಕೃತಿ ಮಧ್ಯೆ ಕುಳಿತು ಪುಸ್ತಕಗಳನ್ನು ಓದಲು ಬಯಸಿದ್ದೇನೆ. ಒಂದು ಮಟ್ಟಿಗೆ ನಾನು ಫ್ರೀ ಆಗಿದ್ದೇನೆಂದು ನಟಿ ಬರೆದುಕೊಂಡಿದ್ದಾರೆ.
ಪಮೇಲಾ ಇನ್ಸ್ಟ್ರಾಗ್ರಾಮ್ ನಲ್ಲಿ 1 ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ. 9 ಲಕ್ಷ ಮಂದಿ ಫೇಸ್ಬುಕ್ ಫಾಲೋ ಮಾಡ್ತಿದ್ದಾರೆ. ನೀವು ನಿಮ್ಮ ಸಮಯವನ್ನು ಹಾಳು ಮಾಡಬೇಡಿ. ಸಾಮಾಜಿಕ ಜಾಲತಾಣಗಳು ಜನರ ಮನಸ್ಸನ್ನು ಹಾಳು ಮಾಡುತ್ತವೆ. ಮನುಷ್ಯರ ಮನಸ್ಸು ಕೆಡಿಸುತ್ತ ಹಣ ಮಾಡ್ತಿವೆ ಎಂದು ಪಮೇಲಾ ಹೇಳಿದ್ದಾರೆ.