ಲಾಸ್ ಏಂಜಲೀಸ್: ಲಾಸ್ ಏಂಜಲೀಸ್ ನಲ್ಲಿ ನಡೆದ ಆಸ್ಕರ್ ಸಮಾರಂಭದಲ್ಲಿ ಅತ್ಯುತ್ತಮ ನಟ ನಾಮನಿರ್ದೇಶಿತ ವಿಲ್ ಸ್ಮಿತ್ ತಮ್ಮ ಪತ್ನಿ ಕಾಣಿಸಿಕೊಂಡ ಬಗ್ಗೆ ಹಾಸ್ಯ ಮಾಡಿದ್ದಕ್ಕಾಗಿ ನಿರೂಪಕ ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಕೆಲ ಸಮಯದ ನಂತರ ಅವರು ‘ಕಿಂಗ್ ರಿಚರ್ಡ್’ ನಲ್ಲಿನ ತನ್ನ ಪಾತ್ರಕ್ಕಾಗಿ ಅತ್ಯುತ್ತಮ ನಟನೆಗಾಗಿ ಆಸ್ಕರ್ ಸ್ವೀಕರಿಸಿದಾಗ, ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ಸಹ ನಾಮನಿರ್ದೇಶಿತರಿಗೆ ಕ್ಷಮೆಯಾಚಿಸಿದರೂ ಕ್ರಿಸ್ ರಾಕ್ ಗೆ ಕ್ಷಮೆ ಕೇಳಲಿಲ್ಲ.
ಕ್ರಿಸ್ ರಾಕ್ ನಿರೂಪಣೆ ಮಾಡುವ ವೇಳೆ ಸ್ಮಿತ್ ಬಗ್ಗೆ ಪ್ರಸ್ತಾಪಿಸಿದ ನಂತರ, ಅವರ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಬಗ್ಗೆ ಹೇಳಿ, ಜಡಾ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದೆಲ್ಲಾ ಮಾತನಾಡಿದ್ದಾರೆ. ಇದರಿಂದ ಸಿಟ್ಟಾದ ವಿಲ್ ಸ್ಮಿತ್ ಸೀದಾ ವೇದಿಕೆ ಮೇಲೆ ಹೋಗಿ ಕಪಾಳಕ್ಕೆ ಬಾರಿಸಿದ್ದಾರೆ. ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದು ತಮಾಷೆ ಪ್ರಸಂಗವಿರಬಹುದೆಂದು ಅಲ್ಲಿದ್ದವರು ಭಾವಿಸಿದ್ದಾರೆ. ನೇರ ಪ್ರಸಾರ ವೀಕ್ಷಿಸುತ್ತಿದ್ದವರು ಕೂಡ ಹೀಗೆಯೇ ತಿಳಿದುಕೊಂಡಿದ್ದಾರೆ. ಕೊನೆಗೆ ಇದು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ನಂತರ ತಿಳಿಗೊಳಿಸಲಾಗಿದೆ.