ಬಾಲಿವುಡ್ನ ಕ್ಯೂಟೆಸ್ಟ್ ದಂಪತಿಯಾದ ರಣಬೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ತಮ್ಮ 2ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋ ಶೇರ್ ಮಾಡಿರುವ ರಣವೀರ್, 2ನೇ ವರ್ಷದ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಗೊಂಬೆ ಎಂದು ಬರೆದುಕೊಂಡಿದ್ದಾರೆ.
ಇದೇ ಫೋಟೋಗಳನ್ನ ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿರುವ ನಟಿ ದೀಪಿಕಾ ಪಡುಕೊಣೆ ಒಂದೇ ಆತ್ಮ ಎರಡು ದೇಹ ಎಂಬರ್ಥದಲ್ಲಿ ಕ್ಯಾಪ್ಶನ್ ಹಾಕಿದ್ದಾರೆ.
ಇಟಲಿಯ ನದಿ ದಡವೊಂದರಲ್ಲಿ ಕ್ಲಿಕ್ಕಿಸಿದ ಫೋಟೋ ಇದಾಗಿದ್ದು , ಇಲ್ಲೇ ಈ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ರಣವೀರ್ ಸಿಂಗ್ ಕುರ್ತಾ ಶೆರ್ವಾನಿ ಹಾಕಿದ್ರೆ ದೀಪಿಕಾ ಸಲ್ವಾರ್ ಕಮೀಜ್ನಲ್ಲಿ ಸಖತ್ ಆಗಿ ಕಾಣ್ತಿದ್ದಾರೆ.