ಬಾಲಿವುಡ್ ನಲ್ಲಿ ಹೆಸರು ಮಾಡಿದ್ದ ʼಶೋಲೆʼ ಚಿತ್ರ ಬಿಡುಗಡೆಯಾಗಿ 45 ವರ್ಷ ಕಳೆದಿದೆ. ಆಗಿನ ಕಾಲದಲ್ಲಿ ಹಿಟ್ ಚಿತ್ರವಾಗಿದ್ದ ಶೋಲೆ ಈಗ್ಲೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಚಿತ್ರದಲ್ಲಿ ಧರ್ಮೇಂದ್ರ, ಅಮಿತಾಬ್ ಬಚ್ಚನ್, ಹೇಮಾ ಮಾಲಿನಿಯಂತಹ ದಿಗ್ಗಜ ನಟರು ನಟಿಸಿದ್ದಾರೆ.
ಚಿತ್ರದ ನಿರ್ದೇಶಕ ರಮೇಶ್ ಸಿಪ್ಪಿ ಚಿತ್ರ, ಚಿತ್ರದ ಶೂಟಿಂಗ್ ಮೆಲುಕು ಹಾಕಿದ್ದಾರೆ. ಈ ಚಿತ್ರದ ಇನ್ನೊಂದು ಹೈಲೆಟ್ ವಿಲನ್ ಪಾತ್ರ. ಗಬ್ಬರ್ ಪಾತ್ರದಲ್ಲಿ ನಟಿಸಲು ಧರ್ಮೇಂದ್ರ ಹಾಗೂ ಅಮಿತಾಬ್ ಬಚ್ಚನ್ ಇಬ್ಬರೂ ಉತ್ಸುಕರಾಗಿದ್ದರಂತೆ. ಲೀಡ್ ರೋಲ್ ಬಿಟ್ಟು ವಿಲನ್ ಪಾತ್ರವನ್ನು ಅವರು ಆರಿಸಿಕೊಳ್ಳಲು ಮುಂದಾಗಿದ್ದರಂತೆ.
ಈ ಚಿತ್ರ, ಕಥೆ, ಕಲಾವಿದರ ಆಯ್ಕೆಗೆ ಎರಡು ವರ್ಷ ಹಿಡಿದಿತ್ತಂತೆ. ಅಕ್ಟೋಬರ್ 3,1973 ರಲ್ಲಿ ಶುರುವಾದ ಕೆಲಸ ಆಗಸ್ಟ್ 15,1975 ರಲ್ಲಿ ಮುಗಿದಿತ್ತಂತೆ. 500 ದಿನಗಳ ಕಾಲ ಶೂಟಿಂಗ್ ನಡೆದಿತ್ತು. ಈಗಿನ ಆಧುನಿಕ ತಂತ್ರಜ್ಞಾನವಿಲ್ಲದೆ ಶೂಟಿಂಗ್ ಮಾಡಲಾಗಿತ್ತು ಎಂದು ಸಿಪ್ಪಿ ಹೇಳಿದ್ದಾರೆ. ಧರ್ಮೇಂದ್ರ, ಗಬ್ಬರ್ ಪಾತ್ರ ಮಾಡಲು ಆಸಕ್ತಿ ತೋರಿದಾಗ, ಹೇಮಾ ಮಾಲಿನಿ ನಿಮಗೆ ಸಿಗುವುದಿಲ್ಲ ಎಂದಿದ್ದರಂತೆ. ಪಾತ್ರದಲ್ಲಿ ಆಸಕ್ತಿ ಹೊಂದಿದ್ದ ಧರ್ಮೇಂದ್ರ ಕೊನೆಗೆ ವೀರೂ ಪಾತ್ರಕ್ಕೆ ಓಕೆ ಎಂದಿದ್ದರಂತೆ.