ಕೊರೋನಾ ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಪಾಡನ್ನು ತನ್ನ ರ್ಯಾಪ್ ಹಾಡುಗಳ ಮೂಲಕ ಜನರ ಮುಂದೆ ತಂದಿಟ್ಟ ಒಡಿಶಾದ ದುಲೇಶ್ವರ್ ಟಂಡಿ ಇದೀಗ ಖ್ಯಾತಿಯ ಉತ್ತುಂಗದಲ್ಲಿ ತೇಲುತ್ತಿದ್ದಾರೆ.
ವಿಜ್ಞಾನ ಪದವೀಧರನಾದ 27 ವರ್ಷದ ಟಂಡಿ ಖುದ್ದು ಒಬ್ಬ ವಲಸೆ ಕಾರ್ಮಿಕ. ಮಾರ್ಚ್ನಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಣೆ ಮಾಡುವ ಒಂದು ದಿನದ ಮುಂಚೆ ಈತ ತನ್ನ ಮನೆಗೆ ಬಂದಿದ್ದಾರೆ.
“ವಲಸೆ ಕಾರ್ಮಿಕನಾಗಿ ನಾನು ಕೇರಳ, ಛತ್ತೀಸ್ಘಡ ಹಾಗೂ ಇನ್ನಿತರ ಜಾಗಗಳಿಗೆ ಹೋಗಿದ್ದೇನೆ. ರಾಯ್ಪುರದಲ್ಲಿ ಟೇಬಲ್ಗಳನ್ನು ಒರೆಸಿದ್ದಲ್ಲದೇ ಸುದ್ದಿ ಪತ್ರಿಕೆಗಳನ್ನು ಹಾಕಿದ್ದೇನೆ. ಕೇರಳದಲ್ಲಿ ಸಿಕ್ಕ ಕೆಲಸಗಳನ್ನು ಮಾಡುತ್ತಾ ಜೀವನ ಕಳೆದಿದ್ದೇನೆ. ಹೀಗಾಗಿ, ವಲಸೆ ಕಾರ್ಮಿಕರ ಸಂಕಷ್ಟ ನನಗೆ ಚೆನ್ನಾಗಿ ಗೊತ್ತಿದೆ” ಎನ್ನುತ್ತಾರೆ ಟಂಡಿ.
ತಮ್ಮ ರ್ಯಾಪ್ ಹಾಡುಗಳ ಮೂಲಕ ಜನಪ್ರಿಯರಾಗುತ್ತಿರುವ ಟಂಡಿಗೆ ’ದುಲೇ ರಾಕರ್’ ಎಂಬ ಮತ್ತೊಂದು ಹೆಸರಿದ್ದು, ಬಾಲಿವುಡ್ನ ರಣವೀರ್ ಸಿಂಗ್ ಅಭಿನಯದ ಗಲ್ಲಿ ಬಾಯ್ ಚಿತ್ರದ ಪಾತ್ರವನ್ನು ಈತನಿಗೆ ಹೋಲಿಕೆ ಮಾಡುತ್ತಿದ್ದಾರೆ ನೆಟ್ಟಿಗರು.
https://www.facebook.com/dule.rocker/videos/1622543134562146/?t=3