ಬಾಲಿವುಡ್ ಬೆಡಗಿ ನೋರಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಇದಕ್ಕಾಗಿ ದೀಪಾವಳಿ ಫೋಟೋಶೂಟ್ ಮಾಡಿಸಿರುವ ನಟಿ ಬಂಗಾರ ಬಣ್ಣದ ಲೆಹಂಗಾದಲ್ಲಿ ದಂತದ ಗೊಂಬೆಯಂತೆ ಕಾಣುತ್ತಿದ್ದಾರೆ.
ತರುಣ್ ತಹಿಲಿಯಾನಿ ವಿನ್ಯಾಸದ ಬಂಗಾರ ಬಣ್ಣದ ಡ್ರೆಸ್ ಇದಾಗಿದೆ. ನೆಟ್ ಸ್ಲೀವ್ ಬ್ಲೌಸ್, ಲೆಹೆಂಗಾ ಹಾಗೂ ಅದಕ್ಕೆ ಹೊಂದುವ ಜರಿ ಬಾರ್ಡರ್ನ ದುಪ್ಪಟ್ಟಾದಲ್ಲಿ ನೋರಾ ಸಖತ್ ಆಗಿ ಕಾಣ್ತಿದ್ದಾರೆ.
ನೆಕ್ಪೀಸ್, ಕಿವಿಯೋಲೆ ಹಾಗೂ ಬಳೆಗಳು ನೋರಾ ಅಂದವನ್ನ ಇನ್ನಷ್ಟು ಹೆಚ್ಚಿಸಿವೆ. ಕೇಶದಲ್ಲಿ ಹೂವಿನ ಆಕಾರದ ಆಭರಣವನ್ನ ಹಾಕಿದ್ದಾರೆ. ಈಕೆಯ ಈ ಸೂಪರ್ ಔಟ್ಫಿಟ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.