ಕೋವಿಡ್-19 ಲಾಕ್‌ಡೌನ್‌ನಿಂದ ಹೊರಬಂದು ಮತ್ತೆ ಸಹಜತೆಗೆ ಮರಳಲು ಅಣಿಯಾಗುತ್ತಿರುವ ನ್ಯೂಜಿಲೆಂಡ್‌ನಲ್ಲಿ ಸಾಂಕ್ರಮಿಕದ ಬಳಿಕ ಹಮ್ಮಿಕೊಳ್ಳಲಾದ ಸಾರ್ವಜನಿಕ ಮ್ಯೂಸಿಕ್ ಮೇಳವೊಂದಕ್ಕೆ ಭರ್ಜರಿ ಪ್ರತಿಕ್ರಿಯೆ ಬಂದಿದೆ.
ಜೂನ್ 2020ರಲ್ಲಿ ದೇಶವು ಸಂಪೂರ್ಣವಾಗಿ ವೈರಸ್ ಮುಕ್ತವಾಗಿದೆ ಎಂದು ಘೋಷಿಸಿ ಎಲ್ಲ ನಿರ್ಬಂಧಗಳನ್ನು ಹಿಂಪಡೆಯಲಾಗಿತ್ತು. ಆದರೆ ಇದರ ಬೆನ್ನಿಗೇ ಹೊಸ ಪ್ರಕರಣಗಳು ದಾಖಲಾದ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಹಾಗೂ ಕ್ವಾರಂಟೈನ್‌ನಂಥ ನಿರ್ಬಂಧಗಳನ್ನು ಮರಳಿ ತರಲಾಯಿತು.
ಆದರೆ ಈ ವಾರಾಂತ್ಯದಲ್ಲಿ ನ್ಯೂಜಿಲೆಂಡ್ ಅತ್ಯಂತ ಜನಪ್ರಿಯ ಮ್ಯೂಸಿಕ್ ಮೇಳವಾದ ಸಿಕ್ಸ್60ಯನ್ನು ಲೈವ್ ನೋಡಲೆಂದು ಇಲ್ಲಿನ ವೈಟಾಂಗಿ ಕ್ರೀಡಾಂಗಣಗಳಲ್ಲಿ ಭರಪೂರ ನೆರೆದಿದ್ದಾರೆ. ಕೋವಿಡ್-19 ಆರಂಭಗೊಂಡ ಬಳಿಕ ದೇಶದಲ್ಲಿ ನಡೆಯುತ್ತಿರುವ ದೊಡ್ಡ ಔಟ್‌ಡೋರ್ ಶೋ ಇದಾಗಿದೆ ಎಂದು ವರದಿಗಳು ತಿಳಿಸುತ್ತಿವೆ.
ಈ ಮ್ಯೂಸಿಕ್ ಮೇಳವು ದೇಶದ ಪ್ರಮುಖ ನಗರಗಳಾದ ಕ್ರೈಸ್ಟ್‌ಚರ್ಚ್, ವೆಲ್ಲಿಂಗ್ಟನ್, ನ್ಯೂಪ್ಲೌಮೌತ್ ಹಾಗೂ ಹ್ಯಾಮಿಲ್ಟನ್‌ಗಳಲ್ಲಿ ಆಯೋಜನೆಗೊಳ್ಳಲಿದೆ.
https://www.instagram.com/p/CKHuZJ2MtEy/?utm_source=ig_web_copy_link