alex Certify ವಿವಾದಿತ ‘ಕೋಲುಮಂಡೆ’ ಹಾಡಿನಿಂದ ಚಂದನ್ ಶೆಟ್ಟಿಗೆ ಮತ್ತೊಂದು ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾದಿತ ‘ಕೋಲುಮಂಡೆ’ ಹಾಡಿನಿಂದ ಚಂದನ್ ಶೆಟ್ಟಿಗೆ ಮತ್ತೊಂದು ಸಂಕಷ್ಟ

ಬೆಂಗಳೂರು: ‘ಕೋಲುಮಂಡೆ’ ರ್ಯಾಪ್ ಸಾಂಗ್ ನಿಂದಾಗಿ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಮಲೈಮಹದೇಶ್ವರ ಸ್ವಾಮಿ ಭಕ್ತರು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಚಂದನ್ ಶೆಟ್ಟಿ ವಿರುದ್ಧ ದೂರು ನೀಡಿದ್ದು ದೂರು ಸ್ವೀಕರಿಸಿದ ಪೊಲೀಸರು ಎಸ್.ಸಿ.ಆರ್. ದಾಖಲಿಸಿದ್ದಾರೆ. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ. ಅಭಿಪ್ರಾಯ ಪಡೆದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು.

‘ಕೋಲುಮಂಡೆ’ ರ್ಯಾಪ್ ಸಾಂಗ್ ಸಂಯೋಜಿಸಿದ್ದ ಚಂದನ್ ಶೆಟ್ಟಿ ಇದರಲ್ಲಿ ಶಿವಶರಣರನ್ನು ಅಶ್ಲೀಲವಾಗಿ ಚಿತ್ರಿಸಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಹಾಡಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಚಂದನ್ ಶೆಟ್ಟಿ ಕ್ಷಮೆ ಯಾಚಿಸಿದ್ದು ಯೂಟ್ಯೂಬ್ ನಿಂದ ಹಾಡು ತೆಗೆಯಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...