![NCB raids Rhea Chakraborty, Samuel Miranda's houses to probe drung angle in Sushant Singh Rajput death case | Go Travel Blogger](https://i1.wp.com/english.cdn.zeenews.com/sites/default/files/2020/09/04/883430-rhea-house-mumbai-pti.gif?ssl=1)
ಮುಂಬೈ: ಡ್ರಗ್ಸ್ ಜಾಲದೊಂದಿಗೆ ಸಂಬಂಧ ಹೊಂದಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ನಟಿ ರಾಗಿಣಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮುಂಬೈನಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಸಂಬಂಧ ಕುರಿತು ತನಿಖೆ ಕೈಗೊಂಡಿರುವ ಎನ್.ಸಿ.ಬಿ. ಅಧಿಕಾರಿಗಳು ರಿಯಾ ಚಕ್ರವರ್ತಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
5 ಸದಸ್ಯರನ್ನೊಳಗೊಂಡ ಎನ್.ಸಿ.ಬಿ. ಅಧಿಕಾರಿಗಳ ತಂಡ ರಿಯಾ ಚಕ್ರವರ್ತಿ ಮತ್ತು ಸ್ಯಾಮುಯಲ್ ಮಿರಾಂಡಾ ಅವರ ಮನೆಗಳ ಮೇಲೆ ದಾಳಿ ನಡೆಸಿದೆ. ಶುಕ್ರವಾರ ಬೆಳ್ಳಂಬೆಳಗ್ಗೆ ರಿಯಾ ನಿವಾಸಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಮುಂಬೈ ಪೊಲೀಸರು ದಾಳಿಗೆ ಸಾಥ್ ನೀಡಿದ್ದಾರೆ. ರಿಯಾ ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಸ್ಯಾಮುಯೆಲ್ ಮಿರಾಂಡಾ ಜಾಲದೊಂದಿಗೆ ನಂಟು ಹೊಂದಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಮಾದಕವಸ್ತು ಕಳ್ಳಸಾಗಣೆದಾರ ಕೈಜಾನ್ ಇಬ್ರಾಹಿಂನನ್ನು ಬಂಧಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.