ಮುಂಬೈ: ಮಾದ ದ್ರವ್ಯ ಪ್ರಕರಣದಲ್ಲಿ ಜನಪ್ರಿಯ ಕಿರುತೆರೆ ಮತ್ತು ಚಲನಚಿತ್ರ ನಟ ಗೌರವ್ ದೀಕ್ಷಿತ್ ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿದೆ.
ಆತನನ್ನು ವಶಕ್ಕೆ ಪಡೆದ ನಂತರ ಅವರ ನಿವಾಸದಿಂದ ‘MDMA’ ಮತ್ತು ‘ಚರಸ್’ ಜಪ್ತಿ ಮಾಡಲಾಗಿದೆ. ವರದಿಯ ಪ್ರಕಾರ, ತನಿಖಾ ಸಂಸ್ಥೆಯು ಲೋಖಂಡ್ ವಾಲಾದಲ್ಲಿರುವ ಆತನ ಮನೆಯಲ್ಲಿ ಹೆಚ್ಚಿನ ಪ್ರಮಾಣದ ನಿಷೇಧಿತ ಡ್ರಗ್ಸ್ ಗಳನ್ನು ಪತ್ತೆ ಮಾಡಿದೆ.
ಗೌರವ್ ದೀಕ್ಷಿತ್ ನಿವಾಸದ ಮೇಲೆ ದಾಳಿ ಮಾಡಿದ ನಂತರ ಅವರನ್ನು ಬಂಧಿಸಲಾಗಿದ್ದು, ಎಂಡಿಎಂಎ ಮತ್ತು ಚರಸ್ ವಶಕ್ಕೆ ಪಡೆಯಾಗಿದೆ. ನಟ ಅಜಾಜ್ ಖಾನ್ ವಿಚಾರಣೆಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ.
ಕೆಲವು ತಿಂಗಳ ಹಿಂದೆ, ಎನ್‌ಸಿಬಿ ಗೌರವ್ ಅವರ ಮುಂಬೈ ನಿವಾಸದ ಮೇಲೆ ದಾಳಿ ಮಾಡಿತ್ತು, ಅಂದು ನಟ ಗೌರವ್ ನಾಪತ್ತೆಯಾಗಿದ್ದ. ಎನ್‌ಸಿಬಿಯ ವಲಯ ನಿರ್ದೇಶಕರಾಗಿರುವ ಸಮೀರ್ ವಾಂಖೇಡೆ, ಮಾದಕ ದ್ರವ್ಯ ಪ್ರಕರಣದಲ್ಲಿ ಗೌರವ್ ಭಾಗಿಯಾಗಿದ್ದಾರೆ ಎಂದು ಹೇಳಿಕೆಯನ್ನು ನೀಡಿದ್ದರು.
ಅಜಾಜ್ ಖಾನ್ ವಿಚಾರಣೆಯ ಸಮಯದಲ್ಲಿ ದೀಕ್ಷಿತ್ ಹೆಸರನ್ನು ಬಹಿರಂಗಪಡಿಸಿದ್ದು, ಅವರು ದೀಕ್ಷಿತ್‌ನಿಂದ MDMA ಮತ್ತು ಇತರ ಔಷಧಿಗಳನ್ನು ಖರೀದಿಸುತ್ತಿದ್ದರು ಎಂದು ಒಪ್ಪಿಕೊಂಡಿದ್ದರು. ಪ್ರಾಥಮಿಕ ತನಿಖೆಯ ನಂತರ, ದೀಕ್ಷಿತ್ ಬಾಲಿವುಡ್‌ನಲ್ಲಿ ಡ್ರಗ್ಸ್ ಪೂರೈಸುತ್ತಾರೆ ಎಂದು ಗೊತ್ತಾಗಿದೆ. ಎನ್‌ಸಿಬಿಯ ತಂಡ ಶುಕ್ರವಾರ ರಾತ್ರಿ ಲೋಖಂಡ್ ವಾಲಾದಲ್ಲಿರುವ ದೀಕ್ಷಿತ್ ಅವರ ನಿವಾಸಕ್ಕೆ ದಾಳಿ ಮಾಡಿದೆ.
ಗೌರವ್ ‘ಹ್ಯಾಪಿ ಭಾಗ್ ಜಾಯೇಗಿ’, ‘ಹ್ಯಾಪಿ ಫಿರ್ ಭಾಗ್ ಜಾಯೇಗಿ’, ‘ದಾಹೆಕ್: ಎ ರೆಸ್ಟ್ಲೆಸ್ ಮೈಂಡ್’, ‘ದಿ ಮ್ಯಾಜಿಕ್ ಆಫ್ ಸಿನೆಮಾ’, ಮತ್ತು ‘ಗಂಗಾ ಕೆ ಪಾರ್ ಸಾಯನ್ ಹಮಾರ್’ ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಸೀತಾ ಔರ್ ಗೀತಾ’ ಸೇರರಿ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.