
ಖ್ಯಾತ ನಟಿ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಅವಳಿ ಗಂಡು ಮಕ್ಕಳಿಗೆ ಪೋಷಕರಾಗಿದ್ದಾರೆ. ನಿರ್ದೇಶಕ ವಿಘ್ನೇಶ್ ಶಿವನ್ ಜಾಲತಾಣದಲ್ಲಿ ಪೋಸ್ಟ್ ಹಾಕಿ ಸಂತೋಷದ ಸುದ್ದಿ ಹಂಚಿಕೊಂಡಿದ್ದಾರೆ.
ಈ ವರ್ಷ ಜೂನ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಂಪತಿ ಮಕ್ಕಳೊಂದಿಗೆ ಪೋಸ್ ನೀಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ನಯನಾ ಮತ್ತು ನಾನು, ಅಮ್ಮ ಮತ್ತು ಅಪ್ಪ ಆಗಿದ್ದೇವೆ. ನಮಗೆ ಅವಳಿ ಗಂಡು ಮಕ್ಕಳಾಗಿವೆ. ನಮ್ಮೆಲ್ಲರ ಪ್ರಾರ್ಥನೆಗಳು, ನಮ್ಮ ಪೂರ್ವಜರ ಆಶೀರ್ವಾದಗಳಿಂದ ಅವಳಿ ಮಕ್ಕಳಾಗಿವೆ ಎಂದು ವಿಘ್ನೇಶ್ ಬರೆದಿದ್ದಾರೆ.
https://www.instagram.com/p/Cjfm3Gqv_Ti/?utm_source=ig_web_copy_link

https://www.instagram.com/p/Cjfo4d_PayY/