
ನಟ ಚಿರಂಜೀವಿ ನಿಧನಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಂತಾಪ ಸೂಚಿಸಿದ್ದಾರೆ. ಹೆಸರು ಚಿರಂಜೀವಿಯಾಗಿದ್ದು, ಅವರು ಅಕಾಲಿಕರಾಗಿ ನಿಧನರಾಗಿದ್ದಾರೆ. ತುಂಬು ಜೀವನ ನಡೆಸದೇ ಕಿರಿಯ ವಯಸ್ಸಲ್ಲೇ ಅವರು ನಿಧನರಾಗಿರುವುದು ವಿಧಿ ವಿಪರ್ಯಾಸವಾಗಿದೆ. ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಚಿರಂಜೀವಿ ಸರ್ಜಾ ಅವರೊಂದಿಗೆ ಸಿನಿಮಾ ಮಾಡದಿದ್ದರೂ, ಅವರೊಂದಿಗೆ ಒಡನಾಟವಿತ್ತು. ಚಿರಂಜೀವಿ ಸರ್ಜಾ ಯುವ ಪ್ರತಿಭಾನ್ವಿತ ನಟರಾಗಿದ್ದರು. ಅವರ ನಿಧನರಾಗಿರುವುದನ್ನು ನಂಬಲು ಆಗುತ್ತಿಲ್ಲ.
ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.