ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಗೆ ಸಂಚು ರೂಪಿಸಿ ಜೈಲು ಪಾಲಾಗಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಸೂಚನೆ ಮೇರೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗುರಿ ಪಟ್ಟಿಯಲ್ಲಿದ್ದಾರೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಭಾನುವಾರ ಹೇಳಿದ್ದಾರೆ.
ಮೂಸೆ ವಾಲಾ ಹತ್ಯೆ ಆರೋಪಿ ಕಪಿಲ್ ಪಂಡಿತ್ ಪ್ರಾಥಮಿಕ ವಿಚಾರಣೆಯಿಂದ ಸಲ್ಮಾನ್ ಖಾನ್ ಹತ್ಯೆಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಂಪತ್ ನೆಹ್ರಾ ಮತ್ತು ಕೆನಡಾ ಮೂಲದ ಪರಾರಿಯಾಗಿರುವ ಗೋಲ್ಡಿ ಬ್ರಾರ್ ಅವರನ್ನು ಸಂಪರ್ಕಿಸಿದ್ದ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರು ತಿಳಿಸಿದರು.
ಮೂಸೆವಾಲಾ ಹತ್ಯೆಯಲ್ಲಿ ಮಹಾರಾಷ್ಟ್ರದಲ್ಲಿ ಬಂಧಿತರಾಗಿರುವ ಸಂತೋಷ್ ಜಾಧವ್ ಮತ್ತು ಅಜೆರ್ಬೈಜಾನ್‌ನಲ್ಲಿ ಬಂಧಿತರಾಗಿರುವ ಸಚಿನ್ ಥಾಪನ್ ಕೂಡ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸುವ ಮಾಡ್ಯೂಲ್‌ನ ಭಾಗವಾಗಿದ್ದರು.
ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮೂಸ್ ವಾಲಾ ಹತ್ಯೆಯಾದ ಕೆಲವು ದಿನಗಳ ನಂತರ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಬಂದಿತ್ತು.
ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಲು ಸಂಪತ್ ನೆಹ್ರಾ ಸಹಯೋಗದಲ್ಲಿ ಪ್ಲಾನ್ ಮಾಡಲಾಗಿತ್ತು ಎಂದು ಡಿಜಿಪಿ ಯಾದವ್ ಹೇಳಿದ್ದಾರೆ. ಕೇಂದ್ರ ಏಜೆನ್ಸಿಗಳ ಸಹಾಯದಿಂದ ಇಂಟರ್‌ಪೋಲ್ ಮೂಲಕ ದರೋಡೆಕೋರ ಗೋಲ್ಡಿ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದರು.