ದೀಪಾವಳಿ ಹಬ್ಬ ಮುಗಿದ್ರೂ ಸಿನಿಮಾ ತಾರೆಯರ ಹಬ್ಬದ ಫೋಟೋಶೂಟ್ಗಳು ಮುಗಿದಂತೆ ಕಾಣ್ತಿಲ್ಲ. ಎಲ್ಲಾ ಸಿನಿರಂಗದ ನಟ – ನಟಿಯರು ಅತ್ಯಂತ ಸುಂದರವಾದ ಧಿರಿಸನ್ನ ಹಾಕಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಇತ್ತ ಗರ್ಭಿಣಿ ಅನುಷ್ಕಾ ಶರ್ಮಾ ಕೂಡ ಶ್ವೇತ ವರ್ಣದ ಸಲ್ವಾರ್ ಧರಿಸಿ ಹಬ್ಬವನ್ನ ಆಚರಿಸಿದ್ರು. ಈ ಧಿರಿಸು ನಿಮಗೆ ಇಷ್ಟವಾಗಿದ್ರೆ ನೀವು ಕೂಡ ಆನ್ಲೈನ್ನಲ್ಲಿ ಇದನ್ನ ಖರೀದಿಸಬಹುದಾಗಿದೆ.
ಮೊದಲ ಮಗುವಿಗಾಗಿ ಕಾತುರರಾಗಿರುವ ಅನುಷ್ಕಾ ಶರ್ಮಾ ದೀಪಾವಳಿ ಔಟ್ಫಿಟ್ ಅನೇಕರಿಗೆ ಇಷ್ಟವಾಗಿರೋದಂತೂ ಸತ್ಯ. ಅಂದಹಾಗೆ ಈ ಡ್ರೆಸ್ನ್ನ ವಿನ್ಯಾಸ ಮಾಡಿದ್ದು ಅನಿತಾ ಡೋಂಗ್ರೆ. ಆಫ್ ವೈಟ್ ಅನಾರ್ಕಲಿ ಕುರ್ತಾದ ಮುಂಭಾಗದಲ್ಲಿ ಕಸೂತಿ ಮಾಡಲಾಗಿದೆ.
ಸಿಂಪಲ್ ಮೇಕಪ್ನಲ್ಲಿದ್ರೂ ಅನುಷ್ಕಾಗೆ ಗರ್ಭಿಣಿ ಕಳೆಯೇ ಇನ್ನಷ್ಟು ಅಂದವನ್ನ ಹೆಚ್ಚಿಸಿದೆ. ಅನುಷ್ಕಾ ಶರ್ಮಾ ಧರಿಸಿರುವ ಈ ಅನಾರ್ಕಲಿ ಸೆಟ್ ಅನಿತಾ ಡೋಂಗ್ರೆಯವರ ವೆಬ್ಸೈಟ್ನಲ್ಲಿ ಲಭ್ಯವಿದೆ. ಹಾಗೂ ಈ ಧಿರಿಸಿಗೆ 26900 ರೂಪಾಯಿಗಳನ್ನ ನಿಗದಿ ಮಾಡಲಾಗಿದೆ.