ಬೆಂಗಳೂರು: ನಟ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್. ಕುಮಾರ್ ಅವರ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ನಾಳೆ ನಿರ್ಮಾಪಕ ಕುಮಾರ್ ಅವರು ರಾಜಕುಮಾರ್ ಪ್ರತಿಮೆ ಎದುರು ಧರಣಿ ನಡೆಸಲಿದ್ದಾರೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವಿನ ಸಂಘರ್ಷ ಮತ್ತೊಂದು ಹಂತ ತಲುಪಿದ್ದು, ನಾಳೆ ಕರ್ನಾಟಕ ಫಿಲ್ಮ್ ಚೇಂಬರ್ ಬಳಿ ಇರುವ ರಾಜಕುಮಾರ್ ಪ್ರತಿಮೆ ಎದುರು ಎಂ.ಎನ್. ಕುಮಾರ್ ಧರಣಿ ನಡೆಸಲಿದ್ದಾರೆ. ಅವರಿಗೆ ಇನ್ನೂ ಕೆಲವು ನಿರ್ಮಾಪಕರು ಸಾಥ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತಮ್ಮಿಂದ ಸುದೀಪ್ ಹಣ ಪಡೆದುಕೊಂಡು ಸಿನಿಮಾ ಮಾಡಿಕೊಡುತ್ತಿಲ್ಲ ಎಂದು ಕುಮಾರ್ ಆರೋಪ ಮಾಡಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಸುದೀಪ್ ಲೀಗಲ್ ನೋಟಿಸ್ ನೀಡಿದ್ದಲ್ಲದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದರ ನಡುವೆ ನಿರ್ಮಾಪಕ ಕುಮಾರ್ ಧರಣಿ ನಡೆಸಲು ಮುಂದಾಗಿದ್ದು, ನಟ, ನಿರ್ಮಾಪಕರ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.