ಗಗನಕ್ಕೇರಿದ್ರೂ ಭೂಮಿಯನ್ನು ಮರೆಯಬಾರದು ಎನ್ನುವ ಮಾತಿದೆ. ಇದಕ್ಕೆ ಮಿಸ್ ಇಂಡಿಯಾ 2020ರ ರನ್ನರ್ ಅಪ್ ಮಾನ್ಯಾ ಸಿಂಗ್ ಉತ್ತಮ ನಿದರ್ಶನ. ಉತ್ತರ ಪ್ರದೇಶದ ದೇವರಿಯಾ ನಿವಾಸಿ ಮಾನ್ಯಾ ಸಿಂಗ್ ತಂದೆ ಆಟೋದಲ್ಲಿ ಮುಂಬೈನ ಸಮಾರಂಭವೊಂದಕ್ಕೆ ಬಂದಿದ್ದಾರೆ. ಮಾನ್ಯರಿಗಾಗಿ ತಂದೆ ಆಟೋ ರ್ಯಾಲಿ ನಡೆಸಿದರು. ಮಾನ್ಯ ಅವರ ತಂದೆಯೇ ಸ್ವತಃ ಆಟೋ ಮುನ್ನಡೆಸುತ್ತಿದ್ದರು. ಮಾನ್ಯಾ ಮತ್ತು ತಾಯಿ ಆಟೋದ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.
ಮಾನ್ಯಾ ಆಟೋ ರ್ಯಾಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾನ್ಯಾ ಕಪ್ಪು ಬಣ್ಣದ ಉಡುಗೆ ಧರಿಸಿದ್ದರು. ತಲೆಯ ಮೇಲೆ ಕಿರೀಟ ಧರಿಸಿದ್ದರು. ಅವರ ತಂದೆ ಜೀನ್ಸ್ ಹಾಗೂ ಶರ್ಟ್ ಧರಿಸಿದ್ದರು. ತಾಯಿ ಸೂಟ್ ಧರಿಸಿದ್ದರು. ಮಾನ್ಯಾ ಮತ್ತು ಅವರ ಪೋಷಕರು ಸಮಾರಂಭಕ್ಕೆ ಬರ್ತಿದ್ದಂತೆ ಅವ್ರನ್ನು ಪ್ರೀತಿಯಿಂದ ಸ್ವಾಗತಿಸಲಾಯ್ತು. ಮಾನ್ಯಾ ದೇಶದ ಧ್ವಜವನ್ನು ಕೈಯಲ್ಲಿ ಹಿಡಿದಿದ್ದರು. ಮುಂಬೈನ ಠಾಕೂರ್ ಕಾಲೇಜಿನಲ್ಲಿ ನಡೆದ ಈ ಗೌರವ ಸಮಾರಂಭದಲ್ಲಿ ಮಾನ್ಯಾ ಪೋಷಕರನ್ನು ಗೌರವಿಸಲಾಯಿತು.
ಕೂದಲು ಮತ್ತು ಚರ್ಮದ ಆರೈಕೆಗೆ ಬಳಸಿ ಅಲೋವೆರಾ ಪೌಡರ್: ತಯಾರಿಸುವುದು ಹೇಗೆ ಗೊತ್ತಾ….?
ಮಾನ್ಯಾ, ಆಟೋ ಡ್ರೈವರ್ ಮಗಳು. ಈ ವರ್ಷ ಮಿಸ್ ಇಂಡಿಯಾ 2020 ರ ರನ್ನರ್ ಅಪ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾನ್ಯಾ ಹಾಗೂ ಅವ್ರ ಪೋಷಕರ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ.