alex Certify 81 ನೇ ವಯಸ್ಸಿನಲ್ಲೂ ಫಿಟ್‌ ಅಂಡ್‌ ಫೈನ್‌ ಆಗಿದ್ದಾರೆ ಈ ನಟನ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

81 ನೇ ವಯಸ್ಸಿನಲ್ಲೂ ಫಿಟ್‌ ಅಂಡ್‌ ಫೈನ್‌ ಆಗಿದ್ದಾರೆ ಈ ನಟನ ತಾಯಿ

ಯಾವಾಗಲೂ ತಮ್ಮ ಮನೋ-ದೈಹಿಕ ಸ್ವಾಸ್ಥ್ಯ ಹಾಗೂ ಶಿಸ್ತಿನ ಜೀವನದಿಂದ ಯುವಕರಿಗೆ ಸ್ಪೂರ್ತಿಯಾಗಿರುವ ನಟ ಮಿಲಿಂದ್ ಸೋಮನ್ ತಮ್ಮ 43ರ ಹರೆಯದಲ್ಲೂ ಸಹ ಅದ್ಭುತವಾದ ಸ್ವಾಭಾವಿಕ ಅಂಗಸೌಷ್ಠವ ಕಾಪಾಡಿಕೊಂಡಿದ್ದಾರೆ.

ಓಡುವುದನ್ನು ಬಹಳ ಪ್ರೀತಿಸುವ ಸೋಮನ್ ಯಾವುದೇ ಜಿಮ್‌ಗೆ ಹೋದವರಲ್ಲ. ದುಶ್ಚಟಗಳಿಂದ ದೂರ ಇರುವ ಇವರಿಗೆ ನಿರ್ದಿಷ್ಟ ಪಥ್ಯ ಇಲ್ಲದೇ ಇದ್ದರೂ ಸಹ ಆರೋಗ್ಯವಾದ ಆಹಾರ ಕ್ರಮವನ್ನು ಮೈಗೂಡಿಸಿಕೊಂಡಿದ್ದಾರೆ.

ಸೋಮನ್‌ ಅವರ ಅಮ್ಮನಿಗೆ ಈಗ 81ರ ಹರೆಯ. ಈ ವಯಸ್ಸಿನಲ್ಲೂ ಬಹಳ ಗಟ್ಟಿಮುಟ್ಟಾಗಿರುವ ಉಷಾ ಸೋಮನ್, ಪ್ರತಿನಿತ್ಯ ನಿಯಮಿತವಾದ ವ್ಯಾಯಾಮ ಮಾಡುತ್ತಾರೆ. ಒಂದೇ ಏಟಿಗೆ ಅವರು 15 ಪುಶ್‌ಅಪ್‌ಗಳನ್ನು ಮಾಡಬಲ್ಲರು. ಅದೂ ಸೀರೆಯುಟ್ಟುಕೊಂಡೇ ಈ ಪುಶ್‌ಅಪ್‌ಗಳನ್ನು ಮಾಡಿದ್ದಾರೆ ಉಷಾ ಸೋಮನ್.

https://www.instagram.com/p/CCQDp5Snj3V/?utm_source=ig_embed

https://www.instagram.com/p/CCLrE9PldQb/?utm_source=ig_embed

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...