ನವದೆಹಲಿ: ಹಿಂದು ದೇವತೆಗಳನ್ನು ಅವಹೇಳನ ಮಾಡಿದ ಆರೋಪದ ಮೇಲೆ ತಿಂಗಳ ಹಿಂದೆ ಬಂಧಿತನಾಗಿದ್ದ ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಮುಂಬೈ ಮೂಲದ ಮುನಾವರ್ ಫಾರುಕಿ ಕಾಮಿಡಿ ಶೋದಲ್ಲಿ ಮಾತನಾಡಿದ್ದನ್ನು ನೋಡಿದ ಜನರ ಸಾಕ್ಷಿ ಹಾಗೂ ವಿಡಿಯೋವನ್ನು ಆಧರಿಸಿ ದೂರು ದಾಖಲಾಗಿತ್ತು. ಜನವರಿ 1 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ವಶಕ್ಕೆ ಪಡೆಯಲಾಗಿತ್ತು. ವಿವಿಧ ಹಂತಗಳಲ್ಲಿ ಮೂರು ಬಾರಿ ಬೇಲ್ ಅರ್ಜಿ ತಿರಸ್ಕೃತವಾಗಿತ್ತು. ನಾಲ್ಕನೇ ಬಾರಿಗೆ ಸುಪ್ರೀಂ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ವಜ್ರದ ಮೇಲಿನ ವ್ಯಾಮೋಹಕ್ಕೆ ಪ್ರಖ್ಯಾತ ರ್ಯಾಪರ್ ಮಾಡಿದ್ದೇನು ಗೊತ್ತಾ…?
ಈ ಹಿಂದೆ ಪ್ರಸಿದ್ಧ ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾ ಹೇಳಿಕೆಗಳೂ ವಿವಾದ ಸೃಷ್ಟಿಸಿದ್ದವು. ಛತ್ರಪತಿ ಶಿವಾಜಿ ಅವರನ್ನು ಅವಮಾನಿಸಿದ್ದಾರೆ ಎಂದು ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ದಾವೆ ವಿಚಾರಣೆ ನಡೆದಿತ್ತು. ಇನ್ನೂ ಹಲವರು ಜನರನ್ನು ನಗಿಸಲು ಹೋಗಿ ಇದೇ ರೀತಿ ವಿವಾದಕ್ಕೆ ಸಿಲುಕಿಕೊಂಡಿದ್ದನ್ನು ಗಮನಿಸಬಹುದು.