
ದೇಸೀ ನೆಟ್ಟಿಗರ ವಲಯದಲ್ಲಿ ಯಾವಾಗಲೂ ಸುದ್ದಿ ಮಾಡುತ್ತಲೇ ಇರುವ ಕಂಗನಾ ರಣಾವತ್, ರೈತರ ಪ್ರತಿಭಟನೆಯ ಪರ-ವಿರೋಧದ ಆನ್ಲೈನ್ ಸಮರದಲ್ಲಿ ಸಖತ್ ಲೈಮ್ ಲೈಟ್ ನಲ್ಲಿರಲು ಯತ್ನಿಸುತ್ತಿದ್ದಾರೆ.
ತಮ್ಮನ್ನು ಜಾಗತಿಕ ನಟರೊಂದಿಗೆ ಹೋಲಿಕೆ ಮಾಡಿಕೊಂಡಿರುವ ಕಂಗನಾ, ಟ್ವಿಟರ್‌ನಲ್ಲಿ ಈ ಸಂಬಂಧ ಸಾಕಷ್ಟು ಪೋಸ್ಟ್‌ಗಳನ್ನು ಹಾಕಿದ್ದಾರೆ.
ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್…!
’’ಸಾಹಸದ ವಿಚಾರದಲ್ಲಿ ತಾವು ಟಾಮ್ ಕ್ರೂಸ್‌ಗಿಂತ ಉತ್ತಮ” ಎನ್ನುವ ಕಂಗನಾ ತನ್ನ ಆಕ್ಷನ್ ಕೌಶಲ್ಯವನ್ನು ’ವಂಡರ್‌ವುಮನ್’ ಗಾಲ್ ಗಡೋಟ್‌ಗೆ ತುಲನೆ ಮಾಡಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರೀಯ ಹಾಗೂ ಜಾಗತಿಕ ಪ್ರಶಸ್ತಿಗಳ ಹೋಲಿಕೆ ಮಾಡಿದ ಬಾಲಿವುಡ್ ನಟಿ, “ನಾನು ಎಷ್ಟು ಆಸ್ಕರ್ ಗೆದ್ದಿದ್ದೇನೆ ಎಂದು ಕೇಳುವ ಯಾರಿಗಾದರೂ, ಮೆರಿಲ್ ಸ್ಟ್ರೀಪ್ ಎಷ್ಟು ರಾಷ್ಟ್ರೀಯ ಅಥವಾ ಪದ್ಮ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎನ್ನಬಹುದಲ್ಲ…? ಗುಲಾಮಗಿರಿಯ ಮನಃಸ್ಥಿತಿಯಿಂದ ಹೊರಬನ್ನಿ. ನೀವೆಲ್ಲರೂ ಆತ್ಮಗೌರವ ಹಾಗೂ ಆತ್ಮಮೌಲ್ಯವನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ” ಎಂದು ಟ್ವೀಟ್ ಮಾಡಿದ್ದಾರೆ.