ದಿವಂಗತ ಚಿರಂಜೀವಿ ಸರ್ಜಾ ಅವರ ಪುಟ್ಟ ಕಂದನಿಗೆ ಭಾನುವಾರ ಮೊದಲ ಬಾರಿಗೆ ಪೋಲಿಯೋ ಹನಿ ಹಾಕಿಸಲಾಯಿತು. ಅದರ ಎರಡು ಫೋಟೋಗಳನ್ನು ಮೇಘನಾ ರಾಜ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
“ಪಲ್ಸ್ ಪೋಲಿಯೋ ಅಭಿಯಾನದಂತೆ ಬೇಬಿ ಸಿ, ಪೊಲಿಯೋ ಹನಿ ಹಾಕಿಸಿಕೊಂಡಿದ್ದು, ಆತನ ಪುಟ್ಟ ಬೆರಳಿಗೆ ಶಾಯಿ ಗುರುತು ಹಾಕಿಸಿಕೊಂಡಿದ್ದಾನೆ. ಕೆಲವೇ ಹನಿಗಳು ಮಕ್ಕಳನ್ನು ಪೋಲಿಯೋದಿಂದ ದೂರ ಇಡಬಲ್ಲದು. ದೇಶವನ್ನು ಪೋಲಿಯೋ ಮುಕ್ತ ಮಾಡಲಿದೆ, ಸುರಕ್ಷಿತವಾಗಿರಿ” ಎಂದು ಮೇಘನಾ ಸಂದೇಶ ನೀಡಿದ್ದಾರೆ. ಮಗುವಿನ ಮುಖ ಕಾಣಿಸದೇ ಪೋಲಿಯೋ ಹನಿ ಹಾಕುವ ಒಂದು ಹಾಗೂ ಆತನ ಬೆರಳಿಗೆ ಶಾಯಿ ಹಾಕಿದ ಇನ್ನೊಂದು ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ದರ್ಶನ್ ಗೆ ಭರ್ಜರಿ ಯಶಸ್ಸು, ‘ರಾಬರ್ಟ್’ ರಿಲೀಸ್ ಗೆ ಗ್ರೀನ್ ಸಿಗ್ನಲ್
ಮೂರು ತಿಂಗಳ ಜ್ಯೂನಿಯರ್ ಚಿರುವಿನ ಹೆಸರನ್ನು ಇದುವರೆಗೂ ಮೇಘನಾ ರಾಜ್ ಕುಟುಂಬ ರಿವೀಲ್ ಮಾಡಿಲ್ಲ. ಕಳೆದ ನವೆಂಬರ್ 12 ರಂದು ಕುಟುಂಬ ವಿಜೃಂಭಣೆಯಿಂದ ತೊಟ್ಟಿಲು ಶಾಸ್ತ್ರ ಆಯೋಜನೆ ಮಾಡಿತ್ತು.
https://www.instagram.com/p/CKtH0EbL1ZU/?utm_source=ig_web_copy_link