ಈಕೆಗೆ ಶಾಂಪಿಂಗ್ ಸುಲಭದ ಮಾತಲ್ಲ. ಆಕೆಗೆ ಶಾರ್ಟ್ಸ್, ಜೀನ್ಸ್ಗಳು ಹೋದ ಕೂಡಲೇ ಸಿಗುವುದು ಕಷ್ಟ….ಕಷ್ಟ…. ಆರಂಭದಲ್ಲಿ ಈ ಎಲ್ಲವಕ್ಕೂ ಬೇಸರಗೊಳ್ಳುತ್ತಿದ್ದ ಯುವತಿ ಇದೀಗ ಅದನ್ನೇ ಪಾಸಿಟಿವ್ ಅಗಿ ಮಾಡಿಕೊಂಡಿದ್ದಾಳೆ.
ಹೌದು, ಅಷ್ಟಕ್ಕೂ ಈಕೆಯ ಹೆಸರು ರೆಟ್ಸೆಂಖ್ರೋಲೋ ಬಡ್ ಎನ್ನುವ ಮಂಗೋಲಿಯಾ ಮೂಲದ ಮಾಡೆಲ್. ಈಕೆ ವಿಶ್ವದಲ್ಲಿ ಎರಡನೇ ಅತಿದೊಡ್ಡ ಕಾಲುಗಳನ್ನು ಹೊಂದಿರುವಾಕೆ. ಆದ್ದರಿಂದ ಆಕೆಗೆ ಸರಿಹೊಂದುವ ಬಟ್ಟೆಗಳೇ ಇಲ್ಲವಂತೆ.
ಸೊಂಟದಿಂದ ಹೀಲ್ ತನಕ 52.18 ಇಂಚಿದೆ. ಆದ್ದರಿಂದ ಅನೇಕ ಸಮಯದಲ್ಲಿ ಆಕೆಗೆ ಭಾರಿ ಸವಾಲುಗಳು ಎದುರಾಗಿದ್ದವು. ಮೂಲತಃ ಮಂಗೋಲಿಯಾದವರಾದರೂ ಈಗ ಅಮೆರಿಕದಲ್ಲಿ ನೆಲೆಸಿ, ಮಾಡೆಲಿಂಗ್ ಮಾಡುತ್ತಿದ್ದಾರೆ.
ಉದ್ದದ ಮಹಿಳೆಯರಿಗೆ ಲೆಗ್ಗಿಂಗ್ಸ್ ಮಾಡುವ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಕೆಯ ತಂದೆ – ತಾಯಿಯೂ ಉದ್ದವಿದ್ದಾರಂತೆ. ಆರಂಭದಲ್ಲಿ ತಮ್ಮ ಎತ್ತರದ ಬಗ್ಗೆ ಬೇಸರವಾದರೂ ಇದೀಗ ಹೆಮ್ಮೆಯಾಗುತ್ತಿದೆ ಎನ್ನುತ್ತಾರೆ.