ನಾರ್ವೆಯ ’ಎಲ್ವಿಸ್ ಪ್ರಸ್ಲೇ’ ಎಂದೇ ಖ್ಯಾತರಾದ ಜೆಲ್ ಹೆನ್ನಿಂಗ್ ಜೋರ್ನ್ಸ್ಟಾಂಡ್ ಎಂಬ ವ್ಯಕ್ತಿ ಹೊಸದೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇಲ್ಲಿನ ಓಸ್ಲೋದ ಬಾರ್ ಒಂದರ ಮುಂದೆ ನಿಂತುಕೊಂಡು ’ಜೈಲ್ ಹೌಸ್ ಸಿಂಗರ್’ ಗೆಟಪ್ನಲ್ಲಿ ಮಿಂಚುತ್ತಾ, ಎಲ್ವಿಸ್ರ ಲೆಜೆಂಡರಿ ಹಾಡುಗಳನ್ನು ಸತತ 50 ಗಂಟೆಗಳು, 50 ನಿಮಿಷಗಳು ಹಾಗೂ 50 ಸೆಕೆಂಡ್ಗಳ ಕಾಲ ನಾನ್ಸ್ಟಾಪ್ ಹಾಡುವ ವಿಶಿಷ್ಟವಾದ ದಾಖಲೆಗೆ ಪಾತ್ರರಾಗಿದ್ದಾರೆ.
’ಜೆಲ್ ಎಲ್ವಿಸ್’ ಹೆಸರಿನಲ್ಲಿ ವೇದಿಕೆ ಹಾಕಿಕೊಂಡಿದ್ದ ಈತ, ರೆಟ್ರೋ ಔಟ್ಫಿಟ್ನಲ್ಲಿ ಜಮಾಯಿಸಿದ್ದಲ್ಲದೇ, ಎಲ್ವಿಸ್ರಂತೆಯೇ ಹೇರ್ಸ್ಟೈಲ್ ಅನ್ನೂ ಮಾಡಿಕೊಂಡು, ಅವರಂತೆಯೇ ಸೈಡ್ ಬರ್ನ್ಗಳನ್ನೂ ಮಾಡಿಕೊಂಡು ಮಿಂಚಿದ್ದಾರೆ. ತಮ್ಮ ಈ ಶೋನಿಂದ ಸಂಗ್ರಹವಾದ ಮೊತ್ತವನ್ನು ಮ್ಯಾನ್ಮಾರ್ ಸಂತ್ರಸ್ತರಿಗೆಂದು ನಿರ್ಮಿಸಲಾಗುತ್ತಿರುವ ಆಸ್ಪತ್ರೆಗೆ ದೇಣಿಗೆ ನೀಡಿದ್ದಾರೆ ಜೆಲ್.