
ತಮಿಳುನಾಡಿನ ತೂತುಕುಡಿಯ ತಿರುಕೋಲೂರ್ ಗ್ರಾಮದ ನಿವಾಸಿಯಾದ ನಿಶಾ ತಮ್ಮ ವಿವಾಹ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಕಲ್ಯಾಣ ಮಂಟಪದ ಮುಂಭಾಗದಲ್ಲಿರುವ ರಸ್ತೆಗೆ ಬಂದು ರೆಟ್ಪೈ ಕಾಂಬು ಹಾಗೂ ಆದಮರೈ ಪ್ರದರ್ಶನ ನೀಡಿದ್ರು. ಆದಿಮರೈ ಅಥವಾ ಆದಿ ಮುರೈ ಸಿಲಾಂಬಮ್ ಜೊತೆ ನಿಕಟ ಸಂಬಂಧ ಹೊಂದಿದೆ. ಇದೊಂದು ಸಮರ ಕಲಾ ಪ್ರಕಾರವಾಗಿದೆ.
ಯುವತಿಯರಲ್ಲಿ ಆತ್ಮರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ನಾನು ಈ ಸಮರ ಕಲೆಯ ಪ್ರದರ್ಶನ ನೀಡಿದೆ ಎಂದು ವಧು ನಿಶಾ ಹೇಳಿದ್ದಾರೆ. ಈ ಸಮರ ಕಲೆ ಪ್ರದರ್ಶನದ ವೇಳೆ ನಿಶಾ ಕೈಯಲ್ಲಿ ಹರಿತವಾದ ಆಯುಧ ಇದ್ದಿದ್ದನ್ನ ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಸೇರಿದಂತೆ ಅನೇಕರು ಈ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.