ನೃತ್ಯ ಎಂಬುದು ಸಂಗೀತದಂತೆ ಜಗತ್ತಿನ ಸಾರ್ವತ್ರಿಕ ಭಾಷೆಯಾಗಿದೆ. ಮಾತೇ ಇಲ್ಲದೆ ನಮ್ಮ ಭಾವನೆಗಳನ್ನು ಎಲ್ಲರಿಗೂ ಅರ್ಥ ಮಾಡಿಸುವ ಶಕ್ತಿ ಅದಕ್ಕಿದೆ.
ವ್ಯಕ್ತಿಯೊಬ್ಬ ತನ್ನ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸುವ ವಿಡಿಯೋ ರೆಡಿಟ್ ಎಂಬ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದು, ಸಾಕಷ್ಟು ವೈರಲ್ ಆಗಿದೆ.
ಅದರಲ್ಲಿ ವ್ಯಕ್ತಿ ಸ್ನೇಕ್ ಆ್ಯಂಡ್ ಲಿಲ್ ಪಾಪ್ ಡಿಜೆ ಹಾಡಿಗೆ ಬ್ರೇಕ್ ಡಾನ್ಸ್ ಮಾಡಿದ್ದಾನೆ.
ಮೊದಲು ಸಾಮಾನ್ಯ ಸ್ಟೆಪ್ನಿಂದ ಪ್ರಾರಂಭವಾದ ನೃತ್ಯ ನಂತರ ಅದ್ಬುತ ಸ್ಟೆಪ್ ಹಾಗೂ ಹಿಪ್ ಹಾಪ್ ಹಂತ ತಲುಪುತ್ತದೆ.
ಸುತ್ತಲೂ ಕುಳಿತ ಸ್ನೇಹಿತರು ಆತನ ಡಾನ್ಸ್ ನೋಡಿ ಖುಷಿ ಪಡುತ್ತಾ ಪ್ರೋತ್ಸಾಹಿಸಿದ್ದಾರೆ. “ಬ್ರೇಕ್ ಡಾನ್ಸಿಂಗ್ ಎಟ್ ಸ್ಪೆಷಲ್ ನೀಡ್ಸ್ ಹೋಂ” ಎಂಬ ಕ್ಯಾಪ್ಶನ್ ನೊಂದಿಗೆ ವಿಡಿಯೋ ಅಪ್ಲೋಡ್ ಮಾಡಲಾಗಿದೆ.
ಯುಎಸ್ ಅಥ್ಲೆಟಿಕ್ಸ್ ಮಾದರಿಯಲ್ಲಿ ಡಾನ್ಸ್ ಮಾಡಿದ್ದಾನೆ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ. ಇನ್ನೊಬ್ಬರು ಆತನ ಎನರ್ಜಿಯನ್ನು ಹೊಗಳಿದ್ದಾರೆ.