ರೆಮ್ಡಿಸಿವರ್ ಈಗ ಬಹು ಚರ್ಚಿತ ಔಷಧಿ. ಅಪಾಯದಲ್ಲಿರುವ ಕೋವಿಡ್ ಸೋಂಕಿತರನ್ನು ರಕ್ಷಿಸಿಕೊಳ್ಳಲು ಬಳಸಲಾಗುತ್ತದೆ.
ಈ ಹೆಸರು ಒಂದು ಹಾಸ್ಯ ವಸ್ತುವಾದ ವಿಡಿಯೋ ಅಂತರ್ಜಾಲದಲ್ಲಿ ಸದ್ದುಮಾಡುತ್ತಿದೆ. ರೆಮ್ಡೆಸಿವಿರ್ ಇಂಜೆಕ್ಷನ್ ಅನ್ನು ರೆಮೋ ಡಿಸೋಜಾ ಎಂದು ಕರೆಯುವ ವ್ಯಕ್ತಿಯ ಕಿರು ಕ್ಲಿಪ್ ವೈರಲ್ ಆಗಿದೆ.
ರೆಮೋ ಡಿಸೋಜಾ ನೃತ್ಯ ಸಂಯೋಜಕ, ನಟ ಮತ್ತು ಚಲನಚಿತ್ರ ನಿರ್ದೇಶಕರಾಗಿದ್ದು, 15 ವರ್ಷಗಳಿಂದ ಬಾಲಿವುಡ್ ನೃತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ಅವರು ವೈರಲ್ ಆದ ವಿಡಿಯೋವನ್ನು ಇನ್ ಸ್ಟಾದಲ್ಲಿ ಶೇರ್ ಮಾಡಿದ್ದಾರೆ.
ಜನರ ಸಮೇತ ಬಾಲ್ಕನಿ ಕುಸಿದ ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಭ್ರಷ್ಟ ಅಧಿಕಾರಿಗಳು ಔಷಧಿ ಮತ್ತು ಚುಚ್ಚುಮದ್ದು ನೀಡಲು ಲಂಚ ತೆಗೆದುಕೊಳ್ಳುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದರೊಂದಿಗೆ ಆ ವಿಡಿಯೋ ಕ್ಲಿಪ್ ಪ್ರಾರಂಭವಾಗುತ್ತದೆ. ನಂತರ ಆತ ರೆಮ್ಡೆಸಿವಿರ್ ಚುಚ್ಚುಮದ್ದಿನ ಬಗ್ಗೆ ಮಾತನಾಡುತ್ತಾರೆ. ಆದರೆ ಸರಿಯಾದ ಹೆಸರನ್ನು ಹೇಳುವ ಬದಲು, “ಸಿಪ್ಲಾ ಕಂಪನಿ ಕಾ ರೆಮೋ ಡಿಸೋಜಾ” ಎಂದು ಅವರು ತಪ್ಪಾಗಿ ಹೇಳುತ್ತಾರೆ. 15 ಸೆಕೆಂಡುಗಳ ಕ್ಲಿಪ್ ಈಗ 6 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 11 ಲಕ್ಷ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
ರೆಮ್ಡೆಸಿವಿರ್ ಒಂದು ಆಂಟಿ-ವೈರಲ್ ಔಷಧಿಯಾಗಿದ್ದು, ಇದನ್ನು ರಕ್ತನಾಳಕ್ಕೆ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ. ಕೋವಿಡ್ ಗೆ ಚಿಕಿತ್ಸೆ ನೀಡಲು ತುರ್ತು ಬಳಕೆಗಾಗಿ ಬಳಕೆಗೆ ಅಧಿಕೃತಗೊಳಿಸಲಾಗಿದೆ.
https://www.instagram.com/p/COzfo0dJOJ_/?utm_source=ig_web_copy_link