
ಬಿಹಾರ ಶಿಕ್ಷಣ ಇಲಾಖೆ ನಡೆಸಿದ 2019ನೇ ಸಾಲಿನ ಸೆಕೆಂಡರಿ ಶಿಕ್ಷಕರ ಅರ್ಹತಾ ಪರಿಕ್ಷೆಯ ಫಲಿತಾಂಶ ಬಿಡುಗಡೆ ಮಾಡಿದ್ದು ವಿಶೇಷ ಕಾರಣಕ್ಕೆ ಈ ಫಲಿತಾಂಶವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಫಲಿತಾಂಶದಲ್ಲಿ ಉರ್ದು, ಸಂಸ್ಕೃತ ಹಾಗೂ ವಿಜ್ಞಾನದ ಪರೀಕ್ಷೆಯಲ್ಲಿ ಹೃಷಿಕೇಶ್ ಎಂಬ ಅಭ್ಯರ್ಥಿಯ ಅಂಕವನ್ನ ಪ್ರಕಟಿಸಿದ ಶಿಕ್ಷಣ ಇಲಾಖೆ ಇದಕ್ಕೆ ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಫೋಟೋ ಹಾಕಿದೆ.
ಸೆಕೆಂಡರಿ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶವನ್ನ ಮಾರ್ಚ್ ತಿಂಗಳಲ್ಲೇ ಬಿಡುಗಡೆ ಮಾಡಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ಮೂರು ವಿಷಯಗಳ ಅಂಕವನ್ನ ಅಪ್ಲೋಡ್ ಮಾಡಿರಲಿಲ್ಲ.
ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಶಿಕ್ಷಣ ಸಚಿವಾಲಯದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಸಹ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ತೇಜಸ್ವಿ ಯಾದವ್ರ ಆರೋಪಗಳಿಗೆ ಪ್ರತ್ಯುತ್ತರ ನೀಡಿದ ಆಡಳಿತ ಪಕ್ಷದ ನಾಯಕ ಗುಲಮ್ ಗೌಸ್, ಇಷ್ಟು ದೊಡ್ಡ ಪ್ರಮಾಣದಲ್ಲಿ ಫಲಿತಾಂಶಗಳನ್ನ ಪ್ರಕಟಿಸುವಾಗ ಸಣ್ಣ ಪುಟ್ಟ ತಪ್ಪುಗಳು ಸರ್ವೇ ಸಾಮಾನ್ಯ ಎಂದು ಹೇಳಿದ್ದಾರೆ.