
ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಶನಿವಾರ ಕೇರಳ ನಟ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರಿಗೆ ಸಮನ್ಸ್ ನೀಡಿದೆ.
ನಕಲಿ ಪುರಾತನ ವಸ್ತುಗಳ ವ್ಯಾಪಾರಿ ಮತ್ತು ವಂಚಕ ಮಾನ್ಸನ್ ಮಾವುಂಕಲ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಸೂಪರ್ ಸ್ಟಾರ್‌ಗೆ ಸಮನ್ಸ್ ಬಂದಿದೆ. 10 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಮುಂದಿನ ವಾರ ಇಡಿ ಮುಂದೆ ಹಾಜರಾಗುವಂತೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮೋಹನ್ ಲಾಲ್ ಅವರಿಗೆ ತಿಳಿಸಲಾಗಿದೆ.