ಇತ್ತೀಚೆಗೆ ನಿಧನರಾದ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ರನ್ನು ಭೇಟಿ ಮಾಡಿದ ಚಿತ್ರ ತಾರೆಯರು, ಕೆಲ ಹೊತ್ತು ಕಾಲ ಕಳೆದರು.
ಜೂನ್ ತಿಂಗಳಲ್ಲಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು. ಈ ಸಂದರ್ಭದಲ್ಲಿ ಪತ್ನಿ ಮೇಘನಾ ನಾಲ್ಕು ತಿಂಗಳ ಗರ್ಭಿಣಿ.
ಈಗ 7 ತಿಂಗಳಾಗಿದ್ದು, ಹೆರಿಗೆಯ ದಿನಗಳು ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ನಟಿಯರಾದ ಮಾಳವಿಕಾ ಅವಿನಾಶ್, ಶ್ರುತಿ, ಸುಧಾರಾಣಿ ಭೇಟಿ ನೀಡಿ ಧೈರ್ಯ ತುಂಬಿದರು.
ನಟ ಸುಂದರರಾಜ್, ಪ್ರಮೀಳಾ ಜೋಷಾಯ್ ಸಹ ಇದ್ದರು. ಪ್ರಮೀಳಾ ಅವರು ಮಾಡಿಕೊಟ್ಟ ಮಸಾಲೆ ದೋಸೆ ಮೆಲ್ಲುತ್ತಾ, ಹಲವು ಹೊತ್ತು ಒಟ್ಟಿಗೆ ಕಾಲ ಕಳೆದರು, ಚರ್ಚೆ, ಹರಟೆ ಜೊತೆಗೆ ಸಾಂತ್ವನ, ಧೈರ್ಯ ಹೇಳಿದರು. ಈ ಸವಿದಿನದ ನೆನಪನ್ನು ಮಾಳವಿಕಾ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಮೇಘನಾಗೆ ಶುಭ ಕೋರಿದ್ದಾರೆ.