ನಟಿ ಮಲೈಕಾ ಅರೋರಾ ತಮ್ಮ ಮಗನ ಜತೆ ಕ್ರಿಕೆಟ್ ಆಡುತ್ತಿರುವ ಫೋಟೋ ವೈರಲ್ ಆಗಿದೆ. ಕಪ್ಪು ಟಿ ಶರ್ಟ್, ಮಾಸ್ಕ್ ಹಾಗೂ ಸ್ಟೈಲಿಶ್ ಪ್ರಿಂಟೆಡ್ ಶಾರ್ಟ್ಸ್ ಹಾಕಿರುವ ಅವರು ಸೋಮವಾರ ಸಂಜೆ ಯೋಗಾ ಸೆಂಟರ್ ಎದುರು ಕಂಡುಬಂದರು.
47 ವರ್ಷದ ಮಲೈಕಾ ಇತ್ತೀಚೆಗಷ್ಟೇ ಧರ್ಮಶಾಲಾದಲ್ಲಿ ನಟ ಅರ್ಜುನ್ ಕಪೂರ್ ಜತೆ ದೀಪಾವಳಿ ಆಚರಿಸಿ ವಾಪಸಾಗಿದ್ದರು. ಟಿವಿ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಮಲೈಕಾ ತಮ್ಮ ಮಗ ಅರ್ಹನ್ ಖಾನ್ ಜತೆ ಫ್ರೀ ಟೈಮ್ನ್ನು ಕ್ರಿಕೆಟ್ ಆಡುವ ಮೂಲಕ ಕಳೆದಿದ್ದಾರೆ. ಮಗ ಅರ್ಹನ್ ಕೂಡ ಕೂಲ್ ಆಗಿ ಕಂಡುಬಂದಿದ್ದು, ವಿಶೇಷ ಎಂದರೆ ಪಕ್ಕದಲ್ಲಿ ಅವರ ಪ್ರೀತಿಯ ನಾಯಿ ಕ್ಯಾಸ್ಪರ್ ಕೂಡ ಇತ್ತು.
ಮಲೈಕಾ ಕಳೆದ ತಿಂಗಳು ತಮ್ಮ ಮಗನ 18 ನೇ ವರ್ಷದ ಹುಟ್ಟು ಹಬ್ಬದ ದಿನ ಆತನ ಜತೆಗಿರುವ ಸಾಕಷ್ಟು ಫೋಟೋಗಳನ್ನು, ಆತ ಚಿಕ್ಕವನಾಗಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ನಡುವೆ ಅರ್ಜುನ್ ಕಪೂರ್ ಜತೆ ಮಲೈಕಾ ಓಡಾಟದ ಬಗ್ಗೆ ಸಾಕಷ್ಟು ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿವೆ.