
ಮುಂಬೈ: ಮುಂಬೈ ಬಳಿ ಕಾರ್ ಅಪಘಾತಕ್ಕೀಡಾಗಿದ್ದು, ನಟಿ ಮಲೈಕಾ ಅರೋರಾ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂರು ವಾಹನಗಳ ನಡುವಿನ ಅಪಘಾತದಲ್ಲಿ ಮಲೈಕಾ ಅರೋರಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಖೋಪೋಲಿ ಪೊಲೀಸರು ಹೇಳಿದ್ದಾರೆ.
ಪೊಲೀಸರು ಘಟನೆಯ ಬಗ್ಗೆ ಪ್ರಸ್ತಾಪಿಸಿ, ಅಪಘಾತ ಹೇಗೆ ಸಂಭವಿಸಿತು ಎಂಬುದರ ತನಿಖೆ ನಂತರ ಎಫ್‌ಐಆರ್ ದಾಖಲಿಸಲಾಗುವುದು. ಅಪಘಾತ ಪೀಡಿತ ಪ್ರದೇಶವಾಗಿರುವ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇ ಯಲ್ಲಿ 38 ಕಿಮೀ ಪಾಯಿಂಟ್‌ನಲ್ಲಿ ಅಪಘಾತ ಸಂಭವಿಸಿದೆ. ಮೂರು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿದ್ದು, ಮೂರು ವಾಹನಗಳು ಹಾನಿಗೊಳಗಾಗಿವೆ. ಮಲೈಕಾ ಅವರ ರೇಂಜ್ ರೋವರ್ ಎರಡು ವಾಹನಗಳ ನಡುವೆ ನಜ್ಜುಗುಜ್ಜಾಗಿದೆ. ಖೋಪೋಲಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಹರೇಶ್ ಕಲ್ಸೇಕರ್ ಹೇಳಿದ್ದಾರೆ.