ಶಾಲಾ ದಿನಗಳಲ್ಲಿ ನೀವು ಖಾಲಿ ಗಾಜಿನ ಬಾಟಲಿಗಳನ್ನ ಬಳಸಿ ಆಟವಾಡಿರಬಹುದು. ಅಲ್ಲದೇ ಗಾಜಿನ ಬಾಟಲನ್ನ ತಬಲಾ ರೀತಿಯಲ್ಲಿ ಬಳಸಿ ಯಾವುದಾದರೊಂದು ಮ್ಯೂಸಿಕ್ ಸೃಷ್ಟಿ ಮಾಡಿರ್ತೀರಾ. ಇಲ್ಲೂ ಕೂಡ ಒಬ್ಬ ಯುವತಿ ಇಂತಹದ್ದೇ ಒಂದು ಪ್ರಯೋಗವನ್ನ ಅತ್ಯಾಧುನಿಕ ಮಟ್ಟದಲ್ಲಿ ಮಾಡಿದ್ದಾರೆ.
ಗಾಜಿನ ಬಾಟಲ್ನಲ್ಲಿ ವಿವಿಧ ಹಂತದಲ್ಲಿ ನೀರನ್ನ ಹಾಕಿದ್ದ ಯುವತಿ ಅದರ ಮಧ್ಯದಲ್ಲಿ ಆಟಿಕೆ ಟ್ರೇನ್ ನ್ನ ಬಿಟ್ಟಿದ್ದಾಳೆ. ಈ ಟ್ರೇನ್ ನಲ್ಲಿದ್ದ ಎರಡು ಪುಟ್ಟ ಸ್ಟಿಕ್ಗಳು ಹಂತಹಂತವಾಗಿ ಗಾಜಿನ ಬಾಟಲಿಯನ್ನ ಸ್ಪರ್ಶಿಸುತ್ತಾ ಹೋಗುತ್ತೆ. ಇದು ಅತ್ಯಂತ ಸುಮಧುರ ಸಂಗೀತವನ್ನ ಹುಟ್ಟು ಹಾಕಿದೆ.
ಟ್ವಿಟರ್ನಲ್ಲಿ ಸದ್ಯ ಈ ವಿಡಿಯೋ ಸಖತ್ ಟ್ರೆಂಡಿಂಗ್ನಲ್ಲಿದೆ. ಜಪಾನ್ ಮೂಲದ ಯುವತಿ ವಿಜ್ಞಾನದ ಕೆಲವೊಂದಿಷ್ಟು ಸೂತ್ರಗಳನ್ನ ಬಳಸಿ ಹುಟ್ಟುಹಾಕಿದ ಈ ಹೊಸ ಮ್ಯೂಸಿಕ್ಗೆ ಗಾಜಿನ ಮ್ಯೂಸಿಕ್ ಅಂತಾ ಕರೆದ್ರೆ ತಪ್ಪಾಗ್ಲಿಕ್ಕಿಲ್ಲ ಎನಿಸುತ್ತೆ,