
ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿ ಹರಡಿಸುವ ವಿಡಿಯೋವನ್ನು ಪಾಪ್ ಗಾಯಕಿ ಮಡೋನ್ನಾ ಶೇರ್ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅವರ ವಿಡಿಯೋವನ್ನು ಇನ್ಸ್ಟಾಗ್ರಾಂ ಸೆನ್ಸಾರ್ ಮಾಡಿದೆ.
ಸ್ಟೆಲ್ಲಾ ಇಮ್ಯೂನಲ್ ಹಾಕಿರುವ ವಿಡಿಯೋವೊಂದನ್ನು ಮಡೋನ್ನಾ ಇತ್ತೀಚೆಗೆ ಶೇರ್ ಮಾಡಿದ್ದರು. ಕೆಲ ದಿನಗಳ ಹಿಂದಷ್ಟೇ ಇದೇ ರೀತಿ ಸುಳ್ಳು ವಿಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇರ್ ಮಾಡಿ ವಿವಾದಕ್ಕೆ ಕಾರಣವಾಗಿತ್ತು.
ಸದಾ ಒಂದಿಲ್ಲೊಂದು ವಿವಾದಿತ ಅಥವಾ ವಿಚಿತ್ರ ರೀತಿಯ ವಿಡಿಯೋ ಹಾಕಿ ಸ್ಟೆಲ್ಲಾ ವಿವಾದ ಸೃಷ್ಟಿಸಿದ್ದರು. ಅದೇ ರೀತಿ ಕೊರೊನಾಕ್ಕೆ ಸಂಬಂಧಿಸಿದಂತೆ ಸ್ಟೆಲ್ಲಾ ಹಾಕಿರುವ ಪೋಸ್ಟ್‌ಗೆ ಬೆಂಬಲಿಸಿ ಮಡೋನ್ನಾ ಶೇರ್ ಮಾಡಿದ್ದರು. ಆದ್ದರಿಂದ ಅವರು ಹಾಕಿರುವ ವಿಡಿಯೊವನ್ನು ಸೆನ್ಸಾರ್ ಮಾಡಿದ್ದು, ಅದನ್ನು ಓಪನ್ ಮಾಡುವ ಮೊದಲು ಸುಳ್ಳು ಸುದ್ದಿ ಎನ್ನುವ ಎಚ್ಚರಿಕೆಯ ಸಂದೇಶ ಬರುತ್ತಿದೆ.