ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಬದಲು ಸಂಜಯ್ ಮುಂಬೈನಲ್ಲಿಯೇ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರ ಜೊತೆ ʼಶಂಶೇರಾʼ ಚಿತ್ರದ ಶೂಟಿಂಗ್ ಕೂಡ ಮಾಡ್ತಿದ್ದಾರೆ.
ಸಂಜಯ್ ದತ್ ಫೋಟೋವನ್ನು ಪತ್ನಿ ಮಾನ್ಯತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಸಂಜಯ್ ದತ್ ಫೋಟೋ ಹಂಚಿಕೊಳ್ಳಲಾಗಿದೆ. ಕಪ್ಪು ಕನ್ನಡಕ ಹಾಕಿ ಕೈಕಟ್ಟಿ ಸಂಜಯ್ ದತ್ ಫೋಸ್ ನೀಡಿದ್ದಾರೆ. ಕಷ್ಟದ ಸಮಯವನ್ನು ನಮ್ಮ ಕುಟುಂಬ ಹೀಗೆ ಎದುರಿಸುತ್ತಿದೆ ಎಂದು ಮಾನ್ಯತಾ ಶೀರ್ಷಿಕೆ ಹಾಕಿದ್ದಾರೆ.
ಆಗಸ್ಟ್ 11ರಂದು ಸಂಜಯ್ ದತ್ ತಮಗೆ ಕ್ಯಾನ್ಸರ್ ಇದೆ ಎಂಬುದನ್ನು ಅಭಿಮಾನಿಗಳಿಗೆ ಹೇಳಿದ್ದರು. ಸಂಜಯ್ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಗೆ ವಿದೇಶಕ್ಕೆ ಹೋಗಲಿದ್ದಾರೆ ಎನ್ನಲಾಗಿತ್ತು. ಇದ್ರಿಂದ ಅವ್ರು ಒಪ್ಪಿಕೊಂಡಿರುವ ಸಿನಿಮಾಗಳಿಗೆ ಅಡ್ಡಿಯಾಗಲಿದೆ ಎಂಬ ಮಾತೂ ಕೇಳಿಬಂದಿತ್ತು. ಆದ್ರೆ ಸಂಜಯ್ ಸದ್ಯ ಮುಂಬೈನಲ್ಲಿಯೇ ಇದ್ದಾರೆ. ಎಲ್ಲ ಸಿನಿಮಾದ ಶೂಟಿಂಗ್ ಮುಗಿಸಿ ವಿದೇಶಕ್ಕೆ ಹೋಗ್ತಾರಾ ಕಾದು ನೋಡಬೇಕಿದೆ.
https://www.instagram.com/p/CE3OZ4LjlVo/?utm_source=ig_embed