ಬಹಳ ವರ್ಷಗಳ ಬಳಿಕ ಗಾಯಕ ಲಕ್ಕಿ ಅಲಿ ಅವರ ಪ್ರಸಿದ್ಧ ಹಾಡುಗಳಲ್ಲೊಂದಾದ ಓ ಸನಮ್ ಹಾಡಿನ ಕ್ಲಿಪ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಇಂಟರ್ನೆಟ್ನಲ್ಲಿ ಸುದ್ದಿಯಾಗಿದ್ದರು.
ಇದೀಗ ಗೋವಾದಲ್ಲಿ ಕಾಣಿಸಿಕೊಂಡಿರುವ ಲಕ್ಕಿ 90ರ ದಶಕದ ಹಾಡನ್ನ ಹಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.
ಬಹಳ ಸಮಯದ ಬಳಿಕ ಅಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿಯ ಗಡ್ಡ ಹಾಗೂ ಕೂದಲು ಅಲಿಗೆ ವಯಸ್ಸಾಗಿದೆ ಅನ್ನೋದನ್ನ ಸ್ಪಷ್ಟವಾಗಿ ಹೇಳುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಅಲಿ ಪ್ರೇಕ್ಷಕರ ಮುಂದೆ ಭರ್ಜರಿ ಪ್ರದರ್ಶನ ನೀಡುತ್ತಿರೋದನ್ನ ಕಾಣಬಹುದಾಗಿದೆ.
ಸಂಗೀತಗಾರ ಲಕ್ಕಿ ಅಲಿ ಸುಮಧುರ ಸಂಗೀತದ ಮೂಲಕ ಅಭಿಮಾನಿಗಳನ್ನ ಮತ್ತೊಮ್ಮೆ ರಂಜಿಸಿದ್ದಾರೆ. ಓ ಸನಮ್, ಇಕ್ ಪಲ್ ಹೈ ಜೀನಾ, ಆ ಭಿ ಜಾ ಸೇರಿದಂತೆ ಹಿಟ್ ಸಾಂಗ್ಗಳನ್ನ ಬಾಲಿವುಡ್ಗೆ ನೀಡಿದ್ದಾರೆ.
https://www.instagram.com/tv/CIsjEp2no2g/?utm_source=ig_web_copy_link