ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವಿಡಿಯೋ ನೋಡಿದರೆ ನೀವು ಖಂಡಿತ ಖುಷಿಪಡ್ತೀರ. ಸಿಮೋನ್ ಬಿ.ಆರ್.ಎಫ್.ಸಿ. ಹಾಪ್ಕಿನ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಆಗಿದೆ.
ಪಾರ್ಕ್ ಒಂದರಲ್ಲಿ ನಾಲ್ಕಾರು ವಾದ್ಯಗಾರರು, ಡ್ರಂ, ಟ್ರಂಪೆಟ್ ಹಿಡಿದು ವಾದ್ಯ ನುಡಿಸುತ್ತಾರೆ. ಅದರಲ್ಲಿ ಒಬ್ಬ ಪುಟ್ಟ ಬಾಲಕ ಹೆಚ್ಚು ಗಮನ ಸೆಳೆದಿದ್ದಾನೆ. ಆತ ಒಂದು ಸಣ್ಣ ಟ್ರಂಪೆಟ್ ಹಿಡಿದು ಎಲ್ಲರ ಜತೆ ಜೋಶ್ ನಿಂದ ನೃತ್ಯ ಮಾಡುತ್ತ ವಾದ್ಯ ನುಡಿಸುತ್ತಾನೆ. 53 ಸೆಕೆಂಡ್ ನ ವಿಡಿಯೋ ಸಾಕಷ್ಟು ಜನ ರೀ ಟ್ವೀಟ್ ಮಾಡಿದ್ದಾರೆ.
ಬಾಲಕನ ಜೋಶ್ ನೋಡಿ ಎದುರು ಸೇರಿದ್ದ ಜನ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಾರೆ. ವಿಡಿಯೋ ಎಲ್ಲಿಯದ್ದು ಎಂಬುದು ಸ್ಪಷ್ಟವಾಗಿಲ್ಲ. ಅಮೆರಿಕಾದ್ದು ಇರಬಹುದು ಎಂದು ಅಂದಾಜಿಸಲಾಗಿದೆ. “ಸಣ್ಣ ಬಾಲಕ ರಸ್ತೆಯ ಬ್ಯಾಂಡ್ ನವರ ಜತೆ ಸೇರಿ ವಾದ್ಯ ಬಾರಿಸುತ್ತಿರುವುದು ನಿಮಗೆ ಖುಷಿ ನೀಡಲಿದೆ” ಎಂದು ಕ್ಯಾಪ್ಶನ್ ನೀಡಲಾಗಿದೆ.
https://twitter.com/HopkinsBRFC/status/1308473972321914886?ref_src=twsrc%5Etfw%7Ctwcamp%5Etweetembed%7Ctwterm%5E1308473972321914886%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Flittle-boy-tags-along-a-street-band-and-plays-music-adorable-video-wins-hearts-online-watch%2F657187