ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿ ನಮ್ಮನ್ನೆಲ್ಲ ಅಗಲಿ ಇಂದಿಗೆ ಮೂರು ವರ್ಷ. ಶ್ರೀದೇವಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಇನ್ಸ್ಟಾಗ್ರಾಮ್ ಖಾತೆ ನೋಡಿದರೆ ಅವರು ಅಲ್ಲಿ ಅವರ ಕುಟುಂಬ ಸದಸ್ಯರ ಜೊತೆಗೆ ಕಾಣಿಸುತ್ತಾರೆ.
ಪತಿ ಬೋನಿ ಕಪೂರ್, ಪುತ್ರಿ ಖುಷಿ ಕಪೂರ್ ಅವರೊಂದಿಗೆ ಈ ಫೋಟೋದಲ್ಲಿ ಶ್ರೀದೇವಿ ನಗುನಗುತ್ತಿದ್ದಾರೆ. ಅದು ದುಬೈನಲ್ಲಿ ನಡೆದ ಸಹೋದರ ಸಂಬಂಧಿ ಮದುವೆ ಸಂದರ್ಭದಲ್ಲಿ ತೆಗೆದ ಚಿತ್ರ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಅದು ಶ್ರೀದೇವಿಯವರ ಕೊನೆ ಪೋಸ್ಟ್.
2018 ರ ಫೆ.24 ರಂದು ದುಬೈನ ಐಷಾರಾಮಿ ಹೋಟೆಲೊಂದರ ಬಾತ್ ಟಬ್ ನಲ್ಲಿ ಶ್ರೀದೇವಿ ಸಾವನ್ನಪ್ಪಿದ್ದರು. ಅವರ ಸಾವು ನಿಗೂಢ ಎಂದು ಪೂರ್ತಿಯಾಗಿ ಹೇಳಲಾಗದಿದ್ದರೂ ಹೇಗೆ ಸತ್ತರು ಎಂಬುದಕ್ಕೆ ಒಪ್ಪಬಹುದಾದಂಥ ಸ್ಪಷ್ಟ ಕಾರಣ ಬಹಿರಂಗವಾಗಿಲ್ಲ.
5 ದಶಕಗಳ ಕಾಲ ವೃತ್ತಿ ಜೀವನದಲ್ಲಿದ್ದ ಅವರು ಮಧ್ಯೆ ಸ್ವಲ್ಪ ಬ್ರೇಕ್ ತೆಗೆದುಕೊಂಡು 2012ರಲ್ಲಿ “ಇಂಗ್ಲಿಷ್ ವಿಂಗ್ಲಿಷ್” ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದರು. ನಂತರ “ಮಾಮ್” ಸಿನಿಮಾದಲ್ಲಿ ನಟಿಸಿ ಗಮನ ಸೆಳೆದರು. “ಝೀರೋ” ಅವರು ನಟಿಸಿದ ಕೊನೆಯ ಚಿತ್ರವಾಗಿತ್ತು.
https://www.instagram.com/p/Bff9j1kBhM3/?utm_source=ig_embed