ನವದೆಹಲಿ: ‘ಕಾಳಿ’ ಸಾಕ್ಷ್ಯ ಚಿತ್ರದ ವಿವಾದದ ಬಳಿಕ ಲೀನಾ ಮತ್ತೊಂದು ವಿವಾದಿತ ಫೋಟೋ ಪೋಸ್ಟ್ ಮಾಡಿದ್ದಾರೆ.
ಮತ್ತೊಂದು ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಟ್ವಿಟರ್ ಖಾತೆಯಲ್ಲಿ ಅವರು ಮತ್ತೊಂದು ವಿವಾದಾತ್ಮಕ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಶಿವ, ಪಾರ್ವತಿ ಪಾತ್ರಧಾರಿಗಳ ಚಿತ್ರವನ್ನು ಪೋಸ್ಟ್ ಮಾಡಲಾಗಿದ್ದು, ನಟರು ಧೂಮಪಾನ ಮಾಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಲೀನಾ ಮಣಿಮೇಕಲೈ ‘ಕಾಳಿ’ ಚಿತ್ರದ ಪೋಸ್ಟರ್‌ನಿಂದ ವಿವಾದಕ್ಕೆ ಒಳಗಾಗಿದ್ದು, ಈಗ ‘ಭಗವಾನ್ ಶಿವ-ಮಾತಾ ಪಾರ್ವತಿ’ ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದೆ. ನಿರ್ಮಾಪಕಿ, ನಿರ್ದೇಶಕಿ ಲೀನಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.