ಬೆಂಗಳೂರು: ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಚಿತ್ರರಂಗದ ಗಣ್ಯಾತಿಗಣ್ಯರು, ರಾಜಕೀಯ ನಾಯಕರು, ಕೋಟ್ಯಂತರ ಅಭಿಮಾನಿಗಳು ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಕನ್ನಡ ಚಿತ್ರರಂಗದ ದಿಗ್ಗಜರು, ನಟ-ನಟಿಯರು ಲತಾ ಅವರ ಕಂಠ ಸಿರಿಯಲ್ಲಿ ಮೂಡಿ ಬಂದ ಹಾಡುಗಳೊಂದಿಗೆ ನೆನಪು ಮೆಲುಕು ಹಾಕುತ್ತಿದ್ದಾರೆ. ಇದೇ ವೇಳೆ ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನನ್ನ ಅತ್ಯಂತ ನೆಚ್ಚಿನ ಧ್ವನಿ. ಸಂಗೀತದ ಮೂಲಕ ಹಲವು ಭಾವನೆಗಳನ್ನು ಅನುಭವಿಸುವಂತೆ ಮಾಡಿದ ನಿಮಗೆ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.
ಮಾಧ್ಯಮಗಳೊಂದಿಗೂ ಮಾತನಾಡಿದ ಶಿವರಾಜ್ ಕುಮಾರ್, ಲತಾ ಮಂಗೇಶ್ಕರ್ ನಿಧನ ನಿಜಕ್ಕೂ ದುಃಖ ತಂದಿದೆ. ಅವರ ಸ್ವರ ದೇವರು ಕೊಟ್ಟ ಕಾಣಿಕೆ. ಎಲ್ಲಾ ಹಾಡುಗಾರರಿಗೂ ಸ್ಫೂರ್ತಿ. ಲತಾ ಮಂಗೇಶ್ಕರ್ ಅವರ ಧ್ವನಿ, ಹಾಡು ಯಾರೂ ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಅವರ ಹಾಡು ಯಾರೇ ಹಾಡಿದರೂ ಅವರ ಆಶಿರ್ವಾದ ಇರುತ್ತೆ ಎಂದು ಹೇಳಿದ್ದು, ‘ಮೈನ್ ತುಝೆ ಜೀತ ಲಿಯಾ…’ ಹಾಡು ಹಾಡುವ ಮೂಲಕ ಸಂತಾಪ ಸೂಚಿಸಿದರು.