ಅಕ್ಷಯ್ ಕುಮಾರ್ ಅಭಿನಯದ ಮುಂಬರುವ ಚಿತ್ರ ‘ಬೆಲ್ ಬಾಟಂ’ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಲಾರಾ ದತ್ತಾ ತಮ್ಮ ಲುಕ್ಸ್‌ನಿಂದ ಎಲ್ಲರನ್ನೂ ದಂಗು ಬಡಿಸಿದ್ದಾರೆ.
ಭಾರತೀಯ ವಾಯುಪಡೆಯಲ್ಲಿದ್ದ ಲಾರಾ ದತ್ತಾರ ತಂದೆ ಖುದ್ದು ಇಂದಿರಾ ಗಾಂಧಿ ಅವರ ವೈಯಕ್ತಿಕ ಪೈಲಟ್ ಸಹ ಆಗಿದ್ದರು. ಇಂತಿಪ್ಪ ಅಪ್ಪನಿಂದಲೇ ತಮ್ಮ ಹೊಸ ಪಾತ್ರದ ಬಗ್ಗೆ ಮೆಚ್ಚುಗೆ ಕೇಳಿದ್ದು ಲಾರಾಗೆ ಭಾರೀ ಖುಷಿಯಾಗಿದೆಯಂತೆ.
“ವಾಯುಪಡೆಯಲ್ಲಿ ಪೈಲಟ್ ಆಗಿದ್ದ ನನ್ನ ತಂದೆ ಶ್ರೀಮತಿ ಗಾಂಧಿಯವರ ವೈಯಕ್ತಿಕ ಪೈಲಟ್ ಆಗಿದ್ದರು. ಅವರಿಗೆ ಇಂದಿರಾ ಗಾಂಧಿ ಹತ್ತಿರದಿಂದ ನೋಡಿದ ಅನುಭವವಿದೆ. ಟ್ರೇಲರ್ ಬಿಡುಗಡೆಯಾದ ಬಳಿಕ ನನ್ನ ಲುಕ್ ನೋಡಿದ ಮೇಲೆ ಅಪ್ಪನಿಂದ ಬಂದ ಪ್ರತಿಕ್ರಿಯೆ ಕಂಡು ನನಗೆ ಬಹಳ ಖುಷಿಯಾಗಿದೆ. ನನಗೆ ಸಿಕ್ಕ ಅತಿ ದೊಡ್ಡ ಕಾಂಪ್ಲಿಮೆಂಟ್ ಅಂದರೆ ಅದೇ,” ಎಂದು ಲಾರಾ ಮಾಧ್ಯಮದೊಂದಿಗೆ ಸಂದರ್ಶನದ ವೇಳೆ ತಿಳಿಸಿದ್ದಾರೆ.
ರೈತರ ಮಕ್ಕಳ ಖಾತೆಗೆ ನೇರ ನಗದು: ‘ಶಿಷ್ಯವೇತನ’ ಜಾರಿ, ಸಿಎಂಗೆ ಬಿ.ಸಿ. ಪಾಟೀಲ್ ಧನ್ಯವಾದ
“ಹಳೆಯ ವಿಡಿಯೋ ಫುಟೇಜ್‌ಗಳನ್ನು ಶೋಧಿಸಿ, ಇಂದಿರಾ ಗಾಂಧಿ ಅವರ ಮ್ಯಾನರಿಸಂ ಹಾಗೂ ವ್ಯಕ್ತಿತ್ವವನ್ನು ಸೂಕ್ಷ್ಮವಾಗಿ ನಾನು ಹಾಗೂ ನಮ್ಮ ನಿದೇರ್ಶಕರು ಗಮನಿಸಿದ್ದೇವೆ. ಅವರು ಮಾತನಾಡುವ ಶೈಲಿ, ಜನರೊಂದಿಗೆ ಬೆರೆಯುತ್ತಿದ್ದ ರೀತಿ ಹಾಗೂ ಪತ್ರಕರ್ತರು ಕೆಣಕಿದಾಗ ಅವರು ಕೊಡುತ್ತಿದ್ದ ಪ್ರತಿಕ್ರಿಯೆಗಳನ್ನೆಲ್ಲಾ ನೋಡಿ ನೋಟ್ಸ್ ಮಾಡಿಕೊಂಡಿದ್ದೆವು. ಆಕೆಯ ಬಗ್ಗೆ ಇನ್ನಷ್ಟು ಮಹತ್ವದ ಮಾಹಿತಿಗಳನ್ನು ನನ್ನ ತಂದೆ ಕೊಡುತ್ತಿದ್ದರು. ಇವೆಲ್ಲವನ್ನೂ ಒಗ್ಗೂಡಿಸಿ ಪಾತ್ರವನ್ನು ರಚಿಸಿದ್ದೇವೆ” ಎಂದು ಲಾರಾ ತಿಳಿಸಿದ್ದಾರೆ.