ಜಗತ್ತಿನ ಅತ್ಯಂತ ಕಿರಿಯ ಶತಕೋಟ್ಯಾಧೀಶೆ ಎಂಬ ಶ್ರೇಯಕ್ಕೆ ಪಾತ್ರಳಾಗಿದ್ದ ಕೈಲಿ ಜೆನ್ನರ್ ತನ್ನ ಸ್ನೇಹಿತೆಯ ವೈದ್ಯಕೀಯ ಚಿಕಿತ್ಸೆಗೆ ಸಾಮಾಜಿಕ ಜಾಲತಾಣದಲ್ಲಿ ದೇಣಿಗೆ ಕೇಳಿ ವಿವಾದಕ್ಕೆ ಸಿಲುಕಿದ್ದಾರೆ.
ಮೇಕಪ್ ಕಲಾವಿದೆಯಾದ 23 ವರ್ಷದ ತನ್ನ ಸಹೋದ್ಯೋಗಿ ಸ್ಯಾಮಿಯೆಲ್ ರೌಡಾಗೆ ಚಿಕಿತ್ಸೆ ಕೊಡಿಸಲು ಇನ್‌ಸ್ಟಾಗ್ರಾಂ ಪುಟವೊಂದರ ಮೂಲಕ ತನಗೆ ದೇಣಿಗೆ ನೀಡಲು ಕೋರಿದ್ದರು. ಕೈಲಿ ಕಾಸ್ಮೆಟಿಕ್ಸ್‌ನಲ್ಲಿ ಕೆಲಸ ಮಾಡುವ ಸ್ಯಾಮುಯೆಲ್ ರಸ್ತೆ ಅಫಘಾತಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಈತನ ಚಿಕಿತ್ಸೆಗೆ ನೆರವಾಗಲೆಂದು $120,000ದ ಅಗತ್ಯವಿರುವ ಕಾರಣ ಇನ್‌ಸ್ಟಾಗ್ರಾಂನಲ್ಲಿ ಗೋಫಂಡ್‌ಮೀ ಎಂಬ ಪುಟವನ್ನು ತೆರೆಯಲಾಗಿತ್ತು.
ಅಂಗಡಿಗೆ ಹೋಗಿ ಮದ್ಯ ಖರೀದಿ ಮಾಡಲು ನಿಮಗಾಗಿರಬೇಕು ಇಷ್ಟು ವಯಸ್ಸು..!
ಇದಾದ ಕೂಡಲೇ ನೆಟ್ಟಿಗರಿಂದ ಭಾರೀ ಟೀಕೆಗೆ ಗ್ರಾಸವಾಗಿದ್ದಾರೆ ಕೈಲಿ. “ಪ್ರತಿ ಗಂಟೆಗೂ 19 ಸಾವಿರ ಡಾಲರ್ ಸಂಪಾದಿಸುವ ಕೈಲಿ ತಮ್ಮ ಕೈಯಿಂದ ಸರ್ಜರಿಗೆ $60,000 ಕೊಡಲು ಮೀನಾಮೇಷ ಎಣಿಸುತ್ತಿದ್ದಾರೆ. ನಮಗೆಲ್ಲಾ ಸಾರ್ವತ್ರಿಕ ಆರೋಗ್ಯ ಸೇವೆಯ ಅಗತ್ಯ ಏಕಿದೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹಣೆ” ಎಂದು ನ್ಯೂಯಾರ್ಕ್ ಮೂಲದ ಮೌಮಿತಾ ಅಹಮದ್ ಪ್ರಶ್ನಿಸಿದ್ದು, “ಕೈಲಿ ಹಾಗೂ ವಾಲ್‌ಮಾರ್ಟ್‌ನಂಥ ಶತಕೋಟ್ಯಾಧೀಶ ಉದ್ಯೋಗದಾತರೂ ಸಹ ತಮ್ಮ ಉದ್ಯೋಗಿಗಳ ಆರೋಗ್ಯ ಸೇವೆಗೆ ದುಡ್ಡು ಪಾವತಿ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ” ಎಂದಿದ್ದಾರೆ.
ಇದೇ ರೀತಿಯ ಪ್ರತಿಕ್ರಿಯೆಗಳು ಬೇರೆ ನೆಟ್ಟಿಗರಿಂದಲೂ ಸಹ ವ್ಯಕ್ತವಾಗಿದ್ದು, ಕೈಲಿ, ಇಷ್ಟೆಲ್ಲಾ ಜಿಪುಣುತನ ತೋರುತ್ತಿರುವುದನ್ನು ಪ್ರಶ್ನಿಸಿದ್ದಾರೆ.
https://twitter.com/disruptionary/status/1373634712347017217?ref_src=twsrc%5Etfw%7Ctwcamp%5Etweetembed%7Ctwterm%5E1373634712347017217%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fkylie-jenner-slammed-for-asking-fans-to-donate-for-friends-accident-but-she-paid-5000-dollars-3562058.html