ಚಿತ್ರಗಳಲ್ಲಿ ಕಿಸ್ಸಿಂಗ್ ಸೀನ್ ಮಾಡುವುದು ಸಾಮಾನ್ಯ ಕೆಲಸವಲ್ಲ. ಬಾಲಿವುಡ್ ಹಾಗೂ ಹಾಲಿವುಡ್ ನಿರ್ದೇಶಕರಿಗೆ ಇದು ಕಷ್ಟದ ಕೆಲಸವೇನಲ್ಲ ಬಿಡಿ. ಆದ್ರೆ ಸೌತ್ ಚಿತ್ರರಂಗದ ನಿರ್ದೇಶಕರಿಗೆ ಇದು ಸ್ವಲ್ಪ ತಲೆನೋವಿನ ಕೆಲಸವೆಂದ್ರೆ ತಪ್ಪಾಗಲಾರದು. ಕಿಸ್ಸಿಂಗ್ ದೃಶ್ಯಗಳನ್ನು ಚಿತ್ರೀಕರಿಸುವಾಗ ಹೊಸ ಹೊಸ ಪ್ರಯೋಗಗಳನ್ನು ಮಾಡ್ತಾರೆ ನಿರ್ದೇಶಕರು.
ಕಿಸ್ಸಿಂಗ್ ದೃಶ್ಯಗಳನ್ನು ನಿರ್ದೇಶಕರು ಹೇಗೆ ಶೂಟ್ ಮಾಡ್ತಾರೆ ಎಂಬುದನ್ನು ಈ ವಿಡಿಯೋದಲ್ಲಿ ಪ್ರೇಕ್ಷಕ ನೋಡಬಹುದು. ಅಯ್ಯೋ, ಲಿಪ್ ಕಿಸ್ ಕೊಡ್ತಾಳಾ ಈ ಹಿರೋಯಿನ್ ಎಂದು ರಾಗ ಎಳೆಯುವ ಜನರು ಇದನ್ನು ನೋಡಲೇಬೇಕು. ಸಿನಿಮಾದಲ್ಲಿ ಎಲ್ಲವನ್ನೂ ರಿಯಲ್ ಆಗಿ ಮಾಡಲ್ಲ ಎಂಬುದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆ.
ತೆಲಗು, ತಮಿಳು ಚಿತ್ರಗಳಲ್ಲಿ ಕಿಸ್ಸಿಂಗ್ ಸೀನ್ ಶೂಟ್ ಮಾಡಲು ನಿರ್ದೇಶಕರು ಹೊಸ ಹೊಸ ಪ್ರಯೋಗಗಳನ್ನು ಮಾಡ್ತಾರೆ. Maattrraan ಚಿತ್ರದ ಶೂಟಿಂಗ್ ನಲ್ಲಿ ಕಿಸ್ಸಿಂಗ್ ದೃಶ್ಯವನ್ನು ಹೇಗೆ ಚಿತ್ರೀಕರಿಸಲಾಗಿದೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಇದನ್ನು ನೋಡಿದ್ರೆ ನೀವೂ ಕೂಡ ನಿರ್ದೇಶಕರನ್ನು ಹೊಗಳದೆ ಇರುವುದಿಲ್ಲ.