
ಖಾಸಗಿ ದ್ವೀಪವೊಂದರಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಹಾಲಿವುಡ್ ನಟಿ ಕಿಮ್ ಕರ್ದಶಿಯನ್ ತಮ್ಮ ಈ ನಡೆಯಿಂದ ಭಾರೀ ಟೀಕೆಗೆ ಒಳಗಾಗಿದ್ದಾರೆ.
ರಿಯಾಲಿಟಿ ಟಿವಿ ಸ್ಟಾರ್ ಆದ ಕರ್ದಶಿಯನ್ ಈ ಬಗ್ಗೆ ಟ್ವೀಟ್ ಮಾಡಿಕೊಂಡು, ’ಎರಡು ವಾರಗಳ ಕಾಲ ಬಹಳಷ್ಟು ವೈದ್ಯಕೀಯ ತಪಾಸಣೆಗಳ ಬಳಿಕ ಈ ಟ್ರಿಪ್ ಮಾಡುತ್ತಿದ್ದು, ಎಲ್ಲರೂ ಕ್ವಾರಂಟೈನ್‌ಗೆ ಒಳಗಾಗಬೇಕೆಂದು ಕೇಳಲಾಗಿತ್ತು” ಎಂದು ಹೇಳಿಕೊಂಡಿದ್ದಾರೆ.
ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಾದರೂ ಜಗತ್ತಿನಲ್ಲಿ ಎಲ್ಲವೂ ಸಹಜವಾಗಿಯೇ ಇದೆ ಎಂಬ ರೀತಿ ಇರಲು ಖಾಸಗಿ ದ್ವೀಪಕ್ಕೆ ಹೋಗಿದ್ದಾಗಿ ಕಿಮ್ ಇದೇ ವೇಳೆ ಹೇಳಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲೂ ಇವೆಲ್ಲಾ ಬೇಕಿತ್ತಾ ಎಂದು ನೆಟ್ಟಿಗರು ಕಿಮ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.