ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಗಳಿಕೆಯಲ್ಲಿ ದಾಖಲೆ ಬರೆದಿದೆ.
ಏಪ್ರಿಲ್ 14 ರಂದು ಬಿಡುಗಡೆಯಾದಾಗಿನಿಂದ ಉತ್ತಮ ಪ್ರದರ್ಶನ ಕಾಣುತ್ತಿರುವ ‘ಕೆಜಿಎಫ್ ಚಾಪ್ಟರ್ 2’ 12 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 900 ಕೋಟಿ ರೂ.ಗಳಿಸಿದೆ. ಇಳಯ ದಳಪತಿ ವಿಜಯ್ ಅವರ ‘ಬೀಸ್ಟ್’ ಮತ್ತು ಅಲ್ಲು ಅರ್ಜುನ್ ಅವರ ‘ಪುಷ್ಪ: ದಿ ರೈಸ್’ ದಾಖಲೆಗಳನ್ನು ಮೀರಿಸಿದ ‘ಕೆಜಿಎಫ್ ಚಾಪ್ಟರ್ 2’ 14 ನೇ ದಿನ ವಿಶ್ವದಾದ್ಯಂತ ಒಟ್ಟು 926.67 ಕೋಟಿ ರೂಪಾಯಿ ಗಳಿಸಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಗಳಲ್ಲಿಯೂ ಉತ್ತಮ ಸ್ಪಂದನೆ ದೊರೆತಿದೆ. ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಪ್ರಕಾರ, ‘ಕೆಜಿಎಫ್ ಚಾಪ್ಟರ್ 2’ ಏ. 14 ರಂದು 19.37 ಕೋಟಿ ರೂ. ಗಳಿಸಿದೆ. ಇದುವರೆಗೆ ವಿಶ್ವದಾದ್ಯಂತ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 926.67 ಕೋಟಿ ರೂ.ಗೆ ತಲುಪಿದೆ.