ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಬಹುಭಾಷಾ ನಟಿ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಯನ್ನ ಕೇರಳ ಹೈಕೋರ್ಟ್ ಶುಕ್ರವಾರದವರೆಗೆ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು ಪಕ್ಷಪಾತಿಯಾಗಿದೆ ಅಂತಾ ಪ್ರಾಸಿಕ್ಯೂಷನ್ ಪರ ವಕೀಲರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಈ ಆದೇಶ ನೀಡಿದೆ.
ಆರೋಪಿ ನಟನಾದ ದಿಲೀಪ್ ಪರ ವಕೀಲ ನನ್ನನ್ನ ಅಹಿತಕರ ವಿಚಾರಣೆಗೆ ಒಳಪಡಿಸಿದ್ರೂ ಸಹ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಮೂಕ ಪ್ರೇಕ್ಷಕರ ರೀತಿ ಸುಮ್ಮನೇ ಇದ್ದರು ಅಂತಾ ಸಂತ್ರಸ್ತೆ ನಟಿ ಆರೋಪ ಮಾಡಿದ್ದಾರೆ.