ಭಾರತೀಯ ಚಿತ್ರೋದ್ಯಮಕ್ಕೆ ಗಾಯಕ ಮೊಹಮ್ಮದ್ ರಫಿರ ಕೊಡುಗೆ ಅನನ್ಯವಾದದ್ದು. ಅವರು ದನಿ ನೀಡಿರುವ ಎವರ್ ಗ್ರೀನ್ ಹಾಡುಗಳನ್ನು ಜನ ಇಂದಿಗೂ ಗುನುಗುತ್ತಲೇ ಇರುತ್ತಾರೆ.
ಕೇರಳದ ಕೋಯಿಕ್ಕೋಡ್‌ನ ಸೌರವ್ ಕೃಷ್ಣನ್ ಹೆಸರಿನ ಹುಡುಗನೊಬ್ಬ ರಫಿ ಅವರ ಹಾಡುಗಳನ್ನು ಹಾಡುವ ಮೂಲಕ ’ಛೋಟಾ ರಫಿ’ ಎಂದೇ ನೆಟ್ಟಿಗರ ಸಮೂಹದಲ್ಲಿ ಖ್ಯಾತನಾಗಿದ್ದಾನೆ.
1969ರಲ್ಲಿ ಬಿಡುಗಡೆಯಾದ ’ಚಿರಾಗ್’ ಚಿತ್ರದ ಹಾಡು, ’ತೇರೆ ಆಂಖೋಂ ಕೇ ಸಿವಾ’ ಹಾಡಿಗೆ ಸೌರವ್ ದನಿ ನೀಡುತ್ತಿರುವ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದೀಗ ಸಾಕಷ್ಟು ವೈರಲ್ ಆಗಿದೆ.