alex Certify KBCಯಲ್ಲಿ ಕೇಳಿದ 1 ಕೋಟಿ ಮೌಲ್ಯದ ಪ್ರಶ್ನೆಗೆ ಉತ್ತರವೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

KBCಯಲ್ಲಿ ಕೇಳಿದ 1 ಕೋಟಿ ಮೌಲ್ಯದ ಪ್ರಶ್ನೆಗೆ ಉತ್ತರವೇನು ಗೊತ್ತಾ….?

KBC12: What is the Rs 1 crore question that Ghaziabad's Chhavi Kumar could not answer? | Tv News – India TV

ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಕೌನ್​ ಬನೇಗಾ ಕರೋಡ್​ಪತಿ ಶೋ ಈಗಾಗಲೇ ಹಲವಾರು ವಿಚಾರಗಳ ಮೂಲಕ ಸುದ್ದಿಯಲ್ಲಿದೆ. ಈ ಆವೃತ್ತಿಯಲ್ಲಿ ಈವರೆಗೆ ಯಾವ ಸ್ಪರ್ಧಿ ಕೂಡ 1 ಕೋಟಿ ರೂಪಾಯಿ ಪ್ರಶ್ನೆ ಹಂತದವರೆಗೆ ಹೋಗಲು ಆಗಲಿಲ್ಲ ಎಂದು ಅಂದುಕೊಳ್ತಿರುವಾಗಲೇ ಘಾಜಿಯಾಬಾದ್​ನ ಸ್ಪರ್ಧಿ 1 ಕೋಟಿಯ ಪ್ರಶ್ನೆಯನ್ನ ಎದುರಿಸಿದ್ದಾರೆ.

ಇಂಗ್ಲೀಷ್​ ಶಿಕ್ಷಕಿಯಾಗಿರುವ ಚಾನ್ವಿ ಕುಮಾರ್​ಗೆ ಬಿಗ್​ ಬಿ ಈ ಸೀಸನ್​ನ ಮೊದಲ 1 ಕೋಟಿ ಮೌಲ್ಯದ ಪ್ರಶ್ನೆಯನ್ನ ಕೇಳಿದ್ದಾರೆ. ಆದರೆ ಈ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಾಗದ ಕಾರಣ ಚಾನ್ವಿ ಆಟವನ್ನ ಕ್ವಿಟ್​ ಮಾಡಿದ್ದಾರೆ.

ಅಂದಹಾಗೆ 1 ಕೋಟಿ ರೂಪಾಯಿ ಮೌಲ್ಯಕ್ಕೆ ಅಮಿತಾಬ್​ ಬಚ್ಚನ್​, 2024ರಲ್ಲಿ ಚಂದ್ರನ ಅಂಗಳಕ್ಕೆ ಕಾಲಿಡಲಿರುವ ನಾಸಾ ತನ್ನ ಈ ಕಾರ್ಯಕ್ರಮಕ್ಕೆ ಯಾವ ಗ್ರೀಕ್​ ದೇವತೆಯ ಹೆಸರನ್ನ ಇಡಲು ನಿರ್ಧರಿಸಲಾಗಿದೆ ಅಂತಾ ಕೇಳಿದ್ದಾರೆ. ಈ ಪ್ರಶ್ನೆಗೆ ಆಯ್ಕೆಯಾಗಿ ರಿಯಾ, ನೆಮೆಸಿಸ್​, ಆಫ್ರೋಡೈಟ್ ಹಾಗೂ ಆರ್ಟೇಮಿಸ್​ ನೀಡಲಾಗಿತ್ತು. ಆದರೆ ರಿಯಾ ಹಾಗೂ ಆರ್ಟೆಮಿಸ್​ ನಡುವೆ ಗೊಂದಲ ಏರ್ಪಟ್ಟ ಕಾರಣ ಚಾನ್ವಿ ಆಟವನ್ನ ಕ್ವಿಟ್​ ಮಾಡಿದ್ದಾರೆ. ಆದರೆ ಈ ಪ್ರಶ್ನೆಗೆ ಸರಿಯಾದ ಉತ್ತರ ಆರ್ಟೆಮಿಸ್​​ ಆಗಿತ್ತು. ಸರಿಯಾದ ಸಮಯಕ್ಕೆ ಆಟವನ್ನ ಕ್ವಿಟ್​ ಮಾಡುವ ಮೂಲಕ ಚಾನ್ವಿ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...