ಬಾಲಿವುಡ್ ನಟಿ ಕತ್ರಿನಾ ಕೈಫ್ ಮಾನವೀಯತೆ ಮೆರೆಯುವ ಕೈಂಕರ್ಯವೊಂದಕ್ಕೆ ಮುಂದಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಮಿಳುನಾಡಿನ ಮದುರೈನಲ್ಲಿ ಬಡಮಕ್ಕಳಿಗೆಂದು ತಮ್ಮ ತಾಯಿ ಶಾಲೆಯೊಂದನ್ನು ತೆರೆದಿರುವ ಕುರಿತಂತೆ ಕತ್ರಿನಾ ಮಾತನಾಡಿದ್ದಾರೆ. ಈ ಸುದ್ದಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಕತ್ರಿನಾ.
ಮೌಂಟೆನ್ ವ್ಯೂ ಶಾಲೆಯು 2015ರಿಂದ ಚಾಲನೆಯಲ್ಲಿದ್ದು, ಬಡಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಒದಗಿಸಲು ಶ್ರಮಿಸುತ್ತಿದೆ ಎಂದಿರುವ ಕತ್ರಿನಾ, ಸದ್ಯ 200ಕ್ಕೂ ಹೆಚ್ಚು ಮಕ್ಕಳಿಗೆ ಈ ಶಾಲೆಯಲ್ಲಿ ಪಾಠ ಮಾಡಲಾಗುತ್ತಿದ್ದು, ನಾಲ್ಕನೇ ತರಗತಿಯವರೆಗೂ ಪಠ್ಯಕೋಣೆಗಳಿದ್ದು, ಮುಂದಿನ ದಿನಗಳಲ್ಲಿ ಇನ್ನೂ 14 ಕೋಣೆಗಳನ್ನು ಸೇರಿಸಲಾಗುತ್ತದೆ ಎಂದಿದ್ದಾರೆ.
https://www.instagram.com/p/CJFq4mcBw8V/?utm_source=ig_web_copy_link